ಜೂನ್ 27 ಸೋಮವಾರ 13 ವರ್ಷದ ಬಾಲಕನೋರ್ವ ಮದ್ರಸಾದಿಂದ ಹಿಂದಿರುಗುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನೋರ್ವ ಆರೋಪ ಮಾಡಿದ್ದ ಘಟನೆ ಮಂಗಳೂರಿನ ಕೃಷ್ಣಾಪುರ ಕಾಟಿಪಳ್ಳದಲ್ಲಿತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ಕ್ಷಿಪ್ರ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬಿದಿದ್ದು, ಆ ಕೋಮು ಸಂಘರ್ಷ ಮಾಡುವ ಕಿಡಿಗೇಡಿಗಳ ಪ್ರಯತ್ನಕ್ಕೆ ತಡೆಬಿದ್ದಿದೆ.ಘಟನೆಯನ್ನು ಮಂಗಳೂರು ಪೊಲೀಸರಿಂದ ವಿಚಾರ ಮಾಡಿದ ವೇಳೆ ಸತ್ಯಾಸತ್ಯೆಗೆ ಹೊರ ಬಂಂದಿದೆ.
ಬಾಲಕ ನೋಡಲು ಕಪ್ಪಾಗಿದ್ದೇನೆ, ಎಷ್ಟು ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ಕಾರಣಕ್ಕೆ ಬಾಲಕ ತನ್ನ ಬಗ್ಗೆ ಎಲ್ಲರೂ ಮಾತನಾಡಬೇಕು ನಾನು ಪ್ರಸಿದ್ಧಿ ಪಡೆಯಲಬೇಕೆಂದು ಈ ರೀತಿಯ ಕೃತ್ಯ ಎಸಗಿದ್ದು, ತಾನೇ ತನ್ನ ಅಂಗಿಯನ್ನು ಪೆನ್ನಿನ ಮೂಲಕ ಹರಿದುಕೊಂಡು ಹಲ್ಲೆಯ ಆರೋಪ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಬಾಲಕನ ಹೇಳಿಕೆಯನ್ನು ಮದ್ರಸ ಶಿಕ್ಷಕರ, ಹೆತ್ತವರ ಹಾಗೂ ವೈದ್ಯರ ಸಮ್ಮುಖದಲ್ಲೇ ಪಡೆದುಕೊಂಡಿದ್ದು, ಆತನ ಆರೋಪ ಸುಳ್ಳು ಎನ್ನುವುದು ತನಿಖೆಯಲ್ಲಿ ಕಥೆ ಕಟ್ಟಿದ್ದ ವಿಚಾರಬಯಲಾಗಿದೆ ಎಂದಿದ್ದಾರೆ.