ಸಂಪುಟದಿಂದ ಅನಂತಕುಮಾರ ಹೆಗಡೆ ವಜಾಗೊಳಿಸಲು ಬಿ.ಆರ್.ಪಾಟೀಲ ಒತ್ತಾಯ
ರಾಷ್ಟ್ರಪತಿ ಭವನದ ಟ್ವಿಟ್ಟರ್ ಖಾತೆಗೆ ಟ್ವಿಟ್ ಮಾಡಿರುವ ಅವರು ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗ ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಹೇಳಿ ಮತ್ತೆ ವಿವಾದ ಭುಗಿಲೆಬ್ಬಿಸಿದ್ದಾರೆ ಎಂದು ದೂರಿದ್ದಾರೆ.