ಬಿಎಸ್‌ವೈ, ಎಚ್‌ಡಿಕೆ, ನಿಮ್ಮಪ್ಪನ ಆಣೆಗೂ ನೀವು ಮತ್ತೆ ಸಿಎಂ ಆಗೋಲ್ಲ: ಸಿಎಂ
ಮಂಗಳವಾರ, 11 ಜುಲೈ 2017 (15:46 IST)
ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಯಡಿಯೂರಪ್ಪ, ಕುಮಾರಸ್ವಾಮಿ ನಾನೇ ಸಿಎಂ ಎನ್ನುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪನವರೇ ಇಂತಹ ಭ್ರಮೆಯಲ್ಲಿ ತೇಲಾಡಬೇಡಿ. ನಿಮ್ಮಪ್ಪನ ಆಣೆಗೂ ನೀವಿಬ್ಬರು ಸಿಎಂ ಆಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ಅವರದು ಕೇವಲ ಢೋಂಗಿ ದಲಿತ ಪ್ರೀತಿ. ಬಸವೇಶ್ವರರ ಹೆಸರು ಹೇಳಿಕೊಂಡು ಓಡಾಡಲು ನಾಚಿಕೆಯಾಗೋಲ್ವಾ? ದಲಿತರ ಮನೆಯಲ್ಲಿ ಹೋಟೆಲ್ ದೋಸೆ ತಿಂದ್ರೆ ಸಮಾನತೆ ಬರುತ್ತಾ? ಎಂದು ವಾಗ್ದಾಳಿ ನಡೆಸಿದರು.
ದಲಿತರ ಮನೆಗೆ ಹೋಗಿ ತಿಂಡಿ ತಿನ್ನುವ ನಾಟಕ ಬಿಡಿ. ನೀವು ಎಂತಹ ನಾಟಕವಾಡಿದರೂ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.