ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಮಾನ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಜೈಲಿನಲ್ಲಿ ಹೇಗಿದೆ ಗೊತ್ತಾ?
ಪ್ರಜ್ವಲ್ ರೇವಣ್ಣ ಈ ಮೊದಲು ವಿಚಾರಣಾಧೀನ ಖೈದಿಯಾಗಿದ್ದರು. ಆಗ ಅವರು ಯಾವುದೇ ಕೆಲಸ ಮಾಡಬೇಕಿರಲಿಲ್ಲ. ಆದರೆ ಈಗ ಅವರು ಅಪರಾಧಿಯೆಂದು ಸಾಬೀತಾಗಿದ್ದು, ಶಿಕ್ಷೆಯೂ ಪ್ರಕಟವಾಗಿದೆ. ಹೀಗಾಗಿ ಈಗ ಅವರು ಇತರೆ ಅಪರಾಧಿಗಳಂತೇ ನಿಯಮಗಳನ್ನು ಪಾಲಿಸಬೇಕು.
ಜೈಲಿನ ನಿಯಮದಂತೆ ಪ್ರಜ್ವಲ್ ರೇವಣ್ಣಗೆ ಕೆಲಸ ಕೊಡಲಾಗಿದೆ. ಇಷ್ಟು ದಿನ ಸಂಸದ, ಶ್ರೀಮಂತರ ಕುಟುಂಬವೆಂದು ಐಷಾರಾಮಿಯಾಗಿ ಕಾಲ ಕಳೆಯುತ್ತಿದ್ದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಈಗ ಕೂಲಿ ಕೆಲಸ ಮಾಡುತ್ತಿದ್ದಾರೆ.
ಜೈಲಿನಲ್ಲಿ ಕೃಷಿ ಸಂಬಂಧಿತ ಕೆಲಸಗಳನ್ನು ಕೂಲಿಯಾಳಿನಂತೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ದಿನಕ್ಕೆ 540 ರೂ. ಕೂಲಿ ನೀಡಲಾಗುತ್ತಿದೆ. ಒಂದು ವರ್ಷದ ಬಳಿಕ ಇದು 615 ರೂ. ಗೆ ಏರಿಕೆಯಾಗಲಿದೆ. ಒಂದು ಕಾಲದಲ್ಲಿ ತಮ್ಮದೇ ತೋಟದಲ್ಲಿ ಆಳು-ಕಾಳುಗಳನ್ನಿಟ್ಟು ಕೆಲಸ ಮಾಡುತ್ತಿದ್ದ ಪ್ರಜ್ವಲ್ ಈಗ ತಾವೇ ಕೂಲಿ ಕೆಲಸ ಮಾಡಬೇಕಿದೆ.