ಹಿಂದಿನ‌ ಸರ್ಕಾರದ ಬಜೆಟ್ ಮುಂದುವರೆಸಿದ್ದಾರೆ ವಿಪಕ್ಷಗಳ ವಾಗ್ದಾಳಿ..!

ಶುಕ್ರವಾರ, 7 ಜುಲೈ 2023 (19:29 IST)
ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ಬಗ್ಗೆ ರಾಜ್ಯದ ಜನರು ಕಾತುರದಿಂದ ಎದುರು ನೋಡ್ತಿದ್ರು.. ಗ್ಯಾರಂಟಿ ಯೋಜನೆಗಳನ್ನ ಈಡೇರುಸ್ತಾರಾ ಇಲ್ಲಾ ಇನ್ನೂ ಕಂಡೀಷನ್ ಹಾಕ್ತಾರಾ ಎಂಬ ಚರ್ಚೆ ಶುರುವಾಗಿತ್ತು. ಬಜೆಟ್  ಮಂಡನೆಗೆ ಸಾಕಷ್ಟು ಲೆಕ್ಕಾಚಾರ ಮಾಡಿ , ಕಳೆದ ೨೦-೨೫ ದಿನಗಳಿಂದ ಸತತವಾಗಿ ಅಧಿಕಾರಿಗಳ ಜೊತೆ ಸಭೆ ಮೇಲೆ ಸಭೆ ಮಾಡಿ ಮಾಹಿತಿಯನ್ನ ಪಡೆದುಕೊಂಡಿದ್ರು ಸಿಎಂ ಸಿದ್ದರಾಮಯ್ಯ. ಅದ್ರಲ್ಲೂ ಹೊಸ ಯೋಜನೆಗಳನ್ನ ಜಾರಿಗೆ ತರಬೇಕಾ, ಗ್ಯಾರಂಟಿ ಯೋಜನೆಗೆ ಎಷ್ಟೆಲ್ಲಾ ಹಣ ಮೀಸಲಿಡಬೇಕು ಅದಕ್ಕೆ ಸಂಪನ್ಮೂಲಗಳ  ಸಂಗ್ರಹ ಹೇಗೆ ಮಾಡೋದು ಅನ್ನೋದನ್ನ ಅಳೆದು ತೂಗಿ ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಮಂಡನೆ ಮಾಡಿದ್ರು.

ಬಜೆಟ್ ಮಂಡಿಸುತ್ತಿದ್ದಂತೆ ಮಾಜಿ ಸಿಎಂ‌ ಕುಮಾರಸ್ವಾಮಿ ಬಜೆಟ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ರು.‌ವಿಧಾನಸೌದದ ತಮ್ಮ ಕಚೇರಿಯಲ್ಲೇ ಬಜೆಟ್ ವೀಕ್ಷಣೆ ಮಾಡ್ತಿದ್ದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಕೇಂದ್ರ ಸರ್ಕಾರ ಹಾಗೂ ಹಿಂದಿನ‌ಸರ್ಕಾರದ ಮೇಲೆ‌ ಗೂಬೆ ಕೂರಿಸುವ ಬಜೆಟ್ ಅಷ್ಟೆ. ದೂಷಣೆ ಮಾಡೋದಕ್ಕೆ ಹೆಚ್ಚಿನ ಪುಟಗಳನ್ನ ಮಾಡಿಕೊಂಡಿದ್ದಾರೆ. ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದೀರಾ ಆದ್ರು ೮೫ ಸಾವಿರ ಕೋಟಿ ಸಾಲ ಯಾಕೆ ಮಾಡ್ತಿದ್ದಿರಾ.. ಗ್ಯಾರಂಟಿ ಯೋಜನೆಗಳಿಗೆ ಕಂಡೀಷನ್ ಹಾಕಿ ಜನರಿಗೆ ಟೋಪಿ ಹಾಕಿದ್ದಾರೆ ಅಂತಾ ಕುಮಾರಸ್ವಾಮಿ ಕಿಡಿ ಕಾರಿದ್ರು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ