ಶಾಲಾ ಮಕ್ಕಳಿದ್ದ ಬಸ್ ಹಳ್ಳಕ್ಕೆ ಬಿತ್ತು; ಮುಂದೇನಾಯ್ತು?

ಗುರುವಾರ, 14 ಮಾರ್ಚ್ 2019 (14:10 IST)
ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ವೊಂದು ಆಯತಪ್ಪಿ ಹಳ್ಳಕ್ಕೆ ಬಿದ್ದಿದೆ.

ಆರ್ ಕೆ ವಿದ್ಯಾ ಸಂಸ್ಥೆಯ ಬಸ್ ಒಂದು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸಮಯದಲ್ಲಿ ಆಯತಪ್ಪಿ  ಹಳ್ಳಕ್ಕೆ ಬಿದ್ದಿದೆ.
ಮದ್ದೂರು ತಾಲ್ಲೂಕಿನ ಕೆ ಹೊನ್ನಲಗೆರೆ ಗ್ರಾಮದ ಹೊರಹೊಲಯದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ವೇಳೆ ಬಸ್ ನಲ್ಲಿ ನಲವತ್ತಕ್ಕೂ ಅಧಿಕ ಮಕ್ಕಳು ಇದ್ದರು. ಮಕ್ಕಳಿಗೆ  ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಮಗುವನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಡಿ ಹೊಸುರು ಗ್ರಾಮದ ಕರಿಯಪ್ಪ ಅವರ ಪುತ್ರ ಮಧು (21) ಮೃತ ಪಟ್ಟ ದುರ್ದೈವಿಯಾಗಿದ್ದಾರೆ. ಗಾಯಾಳು
ಮಕ್ಕಳನ್ನು ಮದ್ದೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ