ಫುಲ್ ರಷ್ ಆದ ಬಸ್ಸು, ಕಿಟಕಿಗಾಗಿ ಮಹಿಳೆಯರ ಫೈಟ್..!
ಬೆಂಗಳೂರು- ಹೆಣ್ಮಕ್ಕಳಿಗೆ ಫ್ರೀ ಬಸ್ ಎಫೆಕ್ಟ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಗಲಾಟೆ ನಡೆಯುತ್ತಲೇ ಇದೆ .ಇಂದು ಕಿಟಕಿ ಓಪನ್ ಮಾಡೋ ವಿಚಾರಕ್ಕೆ ಚಪ್ಪಲಿಯಿಂದ ಮಹಿಳೆಯರು ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೆಜೆಸ್ಟಿಕ್ ಟು ಪೀಣ್ಯಾ ಬಸ್ ನಲ್ಲಿ ಘಟನೆ ನಡೆದಿದೆ.ಮೆಜೆಸ್ಟಿಕ್ ನಿಂದ ಪೀಣ್ಯಾ ಕಡೆ ರಾಜಾಜಿನಗರ ಠಾಣಾ ವ್ಯಾಪ್ತಿಯ ಮೂಲಕ ಹೋಗ್ತಿತ್ತು.ಈ ವೇಳೆ ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಮಹಿಳೆಯರ ಮಧ್ಯೆ ಕಿರಿಕ್ ಉಂಟಾಗಿದೆ.ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿಕೊಂಡಿದ್ದಾರೆ.