ಬಸ್ ಸಂಚಾರ ಆರಂಭ: ಪ್ರಯಾಣಿಕರು ಫುಲ್ ಖುಷ್

ಬುಧವಾರ, 9 ಜನವರಿ 2019 (19:34 IST)
ಭಾರತ್ ಬಂದ್ ಹಿನ್ನೆಲೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭಗೊಂಡಿರುವುದು ಪ್ರಯಾಣಿಕರಲ್ಲಿ ತುಸು ನೆಮ್ಮದಿಗೆ ಕಾರಣವಾಗಿದೆ. ಸಂಜೆಯಾಗುತ್ತಿದ್ದಂತೆ ರಸ್ತೆಗಿಳಿದ ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಗಳಿಗೆ ಜನರು ಮುಗಿಬಿದ್ದು ಹತ್ತಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ‌ರಸ್ತೆಗಿಳಿದ ಬಸ್ ಗಳಲ್ಲಿ ಕೊಂಚ ರಶ್ ಇತ್ತು.
ಬೆಳಿಗ್ಗೆ ಬೆಂಗಳೂರು, ಗ್ರಾಮಾಂತರ ಪ್ರದೇಶ, ಆನೇಕಲ್, ಚಂದಾಪುರದ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದರು ಜನರು. ಎರಡು ದಿನಗಳ ಬಂದ್ ನಿಂದ ಸಹಜ ಸ್ಥಿತಿಯತ್ತ ಮರಳಿದ್ದಾರೆ ಜನರು.

ಶಾಲಾ ಕಾಲೇಜು ಹಾಗು ಕೆಲಸಗಳಿಗೆ ಹೋಗಿರುವವರು ಮನೆಗೆ ಯಾವ ತೊಂದರೆ ಇಲ್ಲದೆ ಹೋಗುವಂತೆ ರಸ್ತೆಗಿಳಿದ ಬಿಎಂಟಿಸಿ, ಕೆಎಸ್ ಆರ್ ಟಿಸಿ‌ ಬಸ್ ಗಳಲ್ಲಿ ಜನರು ಪ್ರಯಾಣ ಕೈಗೊಂಡರು.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ