ಎರಡು ಇಸ್ಪೀಟ್ ಗ್ಯಾಂಗ್ ನಡುವೆ ನೆಡೆದಿದ್ದ ಗಲಾಟೆ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸ್ರು ಪ್ರಕರಣದಲ್ಲಿ ಶಾಮೀಲಾಗಿದ್ದ ಮತ್ತೊಂದು ಗ್ಯಾಂಗ್ ನ್ನ ಬಂಧಿಸಿದ್ದಾರೆ. ರಾಜಾನುಕುಂಟೆ ರೌಡಿಶೀಟರ್ ತಿಮ್ಮೇಗೌಡ ಅಲಿಯಾಸ್ ತಿಮ್ಮ ಹಾಗೂ ಆತನ ಸಹಚರರರಾದ ಹರೀಶ, ನರಸಿಂಹಮೂರ್ತಿ ,ರಾಜು ಬಂಧಿತ ಆರೋಪಿಗಳು. ಕಳೆದವಾರ ಸೋಲದೇವನಹಳ್ಳಿ ಪೊಲೀಸ್ ಸ್ಟೇ|ನ್ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆ ವಿಚಾರವಾಗಿ ಗ್ಯಾಂಗ್ ವಾರ್ ನಡೆದಿತ್ತು. ಹಾಗೆ ನಡೆದ ಗ್ಯಾಂಗ್ ವಾರ್ ನಲ್ಲಿ ಪವನ್ ಅಲಿಯಾಸ್ ಲೈಬಾ ಎಂಬಾತನ ಹೊಟ್ಟೆಗೆ ಬಿಯರ್ ಬಾಟಲ್ ನಿಂದ ಇರಿದ ನಾಲ್ಕೈದು ಮಂದಿ ಪರಾರಿಯಾಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಇದ್ರು ಸೋಲದೇವನಹಳ್ಳಿ ಪೊಲೀಸ್ರು ಕೈಕಟ್ಟಿ ಕುಳಿತಿದ್ರು. ಆದ್ರೆ, ಈ ವಿಷ್ಯ ಅದ್ಯೇಗೋ ಸಿಸಿಬಿ ಪೊಲೀಸ್ರ ಕಿವಿಗೆ ಬಿದ್ದಿತ್ತು. ಕೂಡ್ಲೇ ಕಾರ್ಯ ಪ್ರವೃತ್ತರಾದ ಸಿಸಿಬಿ ಪೊಲೀಸ್ರಿಗೆ ಘಟನೆಯಲ್ಲಿ ರಾಜಾನುಕುಂಟೆ ರೌಡಿಶೀಟರ್ ತಿಮ್ಮನ ಕೈವಾಡವಿರಿವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸ್ರು ತಿಮ್ಮನ ಬೆನ್ನು ಹತ್ತಿದ್ರು. ಹಾಗೆ ಬೆನ್ನತ್ತಿದ ಸಿಸಿಬಿ ಪೊಲೀಸ್ರು ಅರಕೆರೆ ಬಳಿ ತಿಮ್ಮ ಅಂಡ್ ಗ್ಯಾಂಗ್ ಮಾರಕಾಸ್ತ್ರಗಳನ್ನಿಡಿದು ದರೋಡೆಗೆ ಹೊಂಚಾಕುತ್ತಿದ್ದ ವೇಳೆ ದಾಳಿ ಮಾಡಿ ಬಂಧಿಸಿದ್ದಾರೆ.
ಇನ್ನೂ ರೌಡಿ ತಿಮ್ಮ ಕೂಡ ನಗರದ ಹೊರವಲಯದಲ್ಲಿ ಇಸ್ಪೀಟ್ ಅಡ್ಡೆ ನಡೆಸ್ತಿದ್ದು, ಇದೇ ವಿಚಾರಕ್ಕೆ ಗಲಾಟೆ ಮಾಡಿಸಿದ್ದ ಎಂಬುದಾಗಿ ಪೊಲೀಸ್ರ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.