ದೀಪಾವಳಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಅಧಿಕವಾಗಿದೆ. ಮಳೆರಾಯನ ಆಟದಲ್ಲೂ ವ್ಯಾಪಾರ ವಹಿವಾಟು ಜೋರಾಗಿ ಕಂಡುಬಂದಿದೆ.
ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ವ್ಯಾಪಾರ ವಹಿವಾಟು ಮೇಲೆ ಪ್ರಭಾವ ಬೀರಿದ್ದು, ಕಳೆದ ವರ್ಷದ ಸಂಭ್ರಮ ಈ ವರ್ಷ ಕಂಡು ಬಂದಿಲ್ಲ. ಸಂಪ್ರದಾಯ ಪಾಲನೆಗೆ ದೀಪಾವಳಿ ಆಚರಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಕಷ್ಟದ ನಡುವೆಯೇ ಸಂಭ್ರಮದ ದೀಪಾವಳಿ ಹಬ್ಬಕ್ಕೆ ಜನರು ತಯಾರಿ ನಡೆಸಿ ವಸ್ತು ಖರೀದಿಸುತ್ತಿದ್ದಾರೆ. ಅದರಲ್ಲೂ ಸಂಜೆ ಹೊತ್ತಿಗೆ ಗ್ರಾಹಕರು ಗೃಹ ಉಪಯೋಗಿ, ಅಲಂಕಾರಿಕ ವಿದ್ಯುತ್ ದೀಪಗಳು, ಪ್ಲಾಸ್ಟಿಕ್ ತೋರಣಗಳು, ದಿನಸಿ ಸಾಮಗ್ರಿ ಖರೀದಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಇದರಿಂದ ಸಲೀಸಾಗಿ ನಡೆದು ಹೋಗಲು ಸಹ ಸಾಧ್ಯವಾಗದಷ್ಟು ಮಾರುಕಟ್ಟೆ ಗ್ರಾಹಕರಿಂದ ಆವರಿಸಿಕೊಂಡಿತ್ತು.