ಪೌರಕಾರ್ಮಿಕರಿಂದ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ

ಶುಕ್ರವಾರ, 24 ಫೆಬ್ರವರಿ 2023 (19:43 IST)
ಪೌರಕಾರ್ಮಿಕರನ್ನ ಖಾಯಂ ಗೊಳಿಸಿ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ.ಸೀನಿಯರೀಟಿ ಇದ್ರು ನೇಮಕಾತಿ ಖಾಯಂ ಮಾಡಿಲ್ಲ.ಕೊರೋನ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀವಿ.ಸರ್ಕಾರ ನಮಗೆ ತುಂಬಾ ಮೋಸ ಮಾಡಿದೆ.ಅಟೆಂಡೆನ್ಸ್ ನೋಡಿ ನಮ್ಮನ್ನ ಖಾಯಂ ಗೊಳಿಸಿ.ಹೊಸಬರಿಗೆ ಇಲಾಖೆ ಖಾಯಂ ಮಾಡಿದ್ದಾರೆ ನಾವು ಕರೋನ ಕಾಲದಲ್ಲಿ ಕೆಲಸ ಮಾಡಿದವರಿಗೆ ಖಾಯಂ ಮಾಡಿಲ್ಲ.ಬಸವನಗುಡಿಯಲ್ಲಿ ಯಾರನ್ನು ಖಾಯಂ ಮಾಡಿಲ್ಲ.ಒಂದೇ ಕುಟುಂಬಗಳಿಗೆ ಪ್ರತಿ ವಾರ್ಡ್ ನಲ್ಲೂ ಸೆಲೆಕ್ಟ್ ಮಾಡಿದ್ದಾರೆ.ಬಾಡಿಗೆ ಮನೆಯಲ್ಲಿ ಜೀವನ ನಡೆಸತಿದ್ದೇವೆ.100 ರಲ್ಲಿ 10 ರಷ್ಟು ಅಧಿಕಾರಿಗಳು ಮಾತ್ರ ಒಳ್ಳೆಯವರಿದ್ದಾರೆ.ಕಷ್ಟ ಪಟ್ಟವರಿಗೆ ಕೆಲಸ ಕೊಡಿಸಿ ಎಂದು ಪೌರಕಾರ್ಮಿಕರು ತಮ್ಮ ಆಳಲು ತೋಡಿಕೊಂಡಿದ್ದಾರೆ.
 
ಅಲ್ಲದೇ ಒಂದೇ ಕುಟುಂಬದಲ್ಲಿ 15 ದರಿಂದ 16 ಜನ ನೇಮಕಾತಿ ಮಾಡಿದ್ದಾರೆ. 14 ವರ್ಷದಿಂದ ಕೆಲಸ ಮಾಡಿದ್ರು ಕೂಡ ಖಾಯಂ ಗೊಳಿಸಿಲ್ಲ.ಮನೆಯಲ್ಲಿ ಇರೋರಿಗೆ ಬಯೋಮೆಟ್ರಿಕ್ ಆಕ್ಸಿಸ್  ಅವರನ್ನ ಖಾಯಂ ಮಾಡಿದ್ದಾರೆ.ನಾವು ದಿನ ಬೆಳಗ್ಗೆದ್ದು ಕಸ ಗುಡಿಸಿ ಊಟ ನಿದ್ದೆ ಇಲ್ಲದೆ ದುಡಿಯವರಿಗೆ ಮಾತ್ರ ಖಾಯಂ ಮಾಡಿಲ್ಲ.ಈ ಭ್ರಷ್ಟಾಚಾರ ಕಾರಕ್ಕೆ ಆದ್ರೆ ಅವ್ರು ಸಾತ್ ನೀಡಿದ್ದಾರೆ.ಕ್ರಮ ಸಂಖ್ಯೆ 6 ರಲ್ಲಿ ವರ್ಷಕ್ಕಿಂತ ಹೆಚ್ಚು ದುಡಿಯವರನ್ನ ಖಾಯಂ ಮಾಡಬೇಕು.AWE ಅವರಿಂದ ಹೆಚ್ಚು ಭ್ರಷ್ಟಾಚಾರವಾಗಿದೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ