ಉಪಚುನಾವಣೆ ಹಿನ್ನಲೆ; ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಭಾನುವಾರ, 17 ನವೆಂಬರ್ 2019 (10:20 IST)
ಬೆಂಗಳೂರು : ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಈಗಾಗಲೇ 8 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ತಮ್ಮ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಗಜಾನನ ಬಾಲಚಂದ್ರ ಮಂಗಸೂಳಿ-ಅಥಣಿ, ರಾಜುಕಾಗೆ – ಕಾಗೆವಾಡ, ಲಖನ್ ಜಾರಕಿಹೊಳಿ-ಗೋಕಾಕ್, ವೆಂಕಟರಾವ್ ಘೋರ್ಪಡೆ-ವಿಜಯನಗರ, ರಿಜ್ವಾನ್ ಅರ್ಷದ್-ಶಿವಾಜಿನಗರ, ಹಾಗೂ ಕೆ.ಬಿ ಚಂದ್ರಶೇಖರ್-ಕೆ.ಆರ್.ಪೇಟೆ ಟಿಕೆಟ್ ನೀಡಲಾಗಿದೆ.


ಕಾಂಗ್ರೆಸ್ ಉಳಿದ  7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಆದರೆ ಯಶವಂತಪುರ ಕ್ಷೇತ್ರದ ಸಂಭಾವ್ಯ ಟಿಕೆಟ್ ಅಭ್ಯರ್ಥಿ ರಾಜಕುಮಾರ್ ನನಗೆ ಟಿಕೆಟ್ ಬೇಡ ಎಂದ ಹಿನ್ನಲೆಯಲ್ಲಿ ಬೇರೆ ಅಭ್ಯರ್ಥಿಯ ಆಯ್ಕೆಗಾಗಿ ಆ ಕ್ಷೇತ್ರದ ಟಿಕೆಟ್ ಘೋಷಿಸಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ