ಕಾಡ್ಗಿಚ್ಚಿಗೆ ಕೆಂಡವಾದ ಕೆನಡಾ
ಕೆನಡಾದ ಶುಸ್ವಾಪ್ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಹೊತ್ತಿ ಉರಿಯುತ್ತಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಮನೆಗಳು ಸುಟ್ಟು ಕರಕಲಾಗಿವೆ. ಕೆನಡಾದ ದಕ್ಷಿಣಕ್ಕಿರುವ ಒಕನಾಗನ್ ಸರೋವರದ ತೀರದವರೆಗೂ ಕಾಡ್ಗಿಚ್ಚು ಆವರಿಸಿದ್ದು, ಅಲ್ಲಿಗೆ ಬರುವ ಪ್ರವಾಸಿಗರಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಅಲ್ಲಿಯೇ ಸಮೀಪದಲ್ಲಿರುವ ವೆಸ್ಟ್ ಕೆಲೋನಾ ನಗರದಲ್ಲಿ ಸುಮಾರು 35 ಸಾವಿರ ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಕೆಲೋನಾ ನಗರದಲ್ಲಿರುವ 20000 ನಿವಾಸಿಗಳಲ್ಲಿ 19000 ನಿವಾಸಿಗಳನ್ನ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.