ಕಾಡಾನೆಗಳನ್ನು ಸೆರೆಹಿಡಿಯಿರಿ ಎಂದ ಸರಕಾರ

ಗುರುವಾರ, 10 ಸೆಪ್ಟಂಬರ್ 2020 (23:48 IST)
ದಾಂಧಲೆ ನಿರತವಾಗಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಸಕಾ೯ರ ಅನುಮತಿ ನೀಡಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ 2 ಹಾಗೂ ಮಡಿಕೇರಿ ವಿಭಾಗದಲ್ಲಿ 2 ಕಾಡಾನೆಗಳು ಸೇರಿದಂತೆ  ದಾಂಧಲೆನಿರತವಾಗಿರುವ ಒಟ್ಟು 4 ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದೆ.

ಹೀಗಂತ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್ ತಿಳಿಸಿದ್ದಾರೆ.

ಕೊಡಗಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ.

ಉಪಟಳ ನೀಡುವ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಗೊಳಿಸಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಹೀರಲಾಲ್  ಮಾಹಿತಿ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ