ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ !

ಶುಕ್ರವಾರ, 9 ಡಿಸೆಂಬರ್ 2022 (09:48 IST)
ಬೆಂಗಳೂರು  : ನಗರದ ಮಹಿಳಾ ಪಿಜಿಯೊಂದರ ಯುವತಿಯರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಕಾಮುಕನೊಬ್ಬನನ್ನ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾಂಡಿಚೇರಿ ಮೂಲದ ನಿರಂಜನ್ ಬಂಧಿತನಾಗಿದ್ದು, ಇತ್ತೀಚೆಗೆ ತಾನು ನೆಲೆಸಿದ್ದ ಪಿಜಿಯಲ್ಲಿ ಯುವತಿಯರು ಸ್ನಾನಕ್ಕೆ ಹೋದಾಗ ಅಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಮೊಬೈಲ್ಗೆ ಅನಾಮಧೇಯ ಸಂದೇಶ ಕಳುಹಿಸಿ ಸೆಕ್ಸ್ಗೆ ಒತ್ತಾಯಿಸಿದ್ದ.

ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಎಸ್.ಟಿ ಯೋಗೇಶ್ ನೇತೃತ್ವದ ತಂಡವು, ಯುವತಿ ಹೆಸರಿನಲ್ಲಿ ತಾವೇ ಯುವಕನಿಗೆ ಚಾಟಿಂಗ್ ಮಾಡಿದ್ದಾರೆ. ಬಳಿಕ ಸೆಕ್ಸ್ಗೆ ಒಪ್ಪಿಕೊಂಡಿರುವುದಾಗಿ ಆಫರ್ ಕೊಟ್ಟು ಕಾಮುಕನನ್ನ ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ