ಬಿ ಫಾರಂ ಸ್ವೀಕಾರ ವಿಚಾರವಾಗಿ ಚುನಾವಣಾ ಆಯೋಗ ಹೈಗ್ರೌಂಡ್ಸ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ

ಶನಿವಾರ, 27 ನವೆಂಬರ್ 2021 (20:46 IST)
ಬೆಂಗಳೂರು: ಅಭ್ಯರ್ಥಿ ಪರ ಸರ್ಕಾರಿ ಅಧಿಕಾರಿ ಬಿ ಫಾರಂ ಸ್ವೀಕಾರ ವಿಚಾರವಾಗಿ ಚುನಾವಣಾ ಆಯೋಗ  ಹೈಗ್ರೌಂಡ್ಸ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.
ಅಬಕಾರಿ ಅಧಿಕಾರಿ ಬಿ.ಎಂ. ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬಕಾರಿ ಅಧಿಕಾರಿ ಬಿ.ಎಂ. ಸುನಿಲ್ ಎಂಬುವವರು ಗಾಯತ್ರಿ ಶಾಂತೇಗೌಡ ಪರವಾಗಿ ಕೆಪಿಸಿಸಿ ಕಚೇರಿಗೆ ಹಾಜರಾಗಿ ಬಿ ಫಾರಂ ಪಡೆದಿದ್ದರು.
ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರ ಬಿ ಫಾರಂ ಸ್ವೀಕರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಹಿನ್ನೆಲೆ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಬಿ. ಎಂ. ಸುನೀಲ್ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರಿಂದ ಬಿ ಫಾರಂ ಪಡೆದು ಅಭ್ಯರ್ಥಿಗೆ ನೀಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ