ಕೊರೋನಾದಿಂದ ಜನ ಸಾಯಲು ಚುನಾವಣಾ ಆಯೋಗವೇ ಕಾರಣ: ಮದ್ರಾಸ್ ಕೋರ್ಟ್ ಆಕ್ರೋಶ
ಚುನಾವಣಾ ಆಯೋಗದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಮದ್ರಾಸ್ ಹೈಕೋರ್ಟ್ ನಿಮ್ಮ ಸಂಸ್ಥೆ ಏಕಾಂಗಿಯಾಗಿ ಇಂಥಾ ಪರಿಸ್ಥಿತಿಗೆ ಕಾರಣ. ನಿಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಎಲ್ಲಕ್ಕಿಂತ ಹೆಚ್ಚು ಸಾರ್ವಜನಿಕರ ಆರೋಗ್ಯ ಮುಖ್ಯ ಎಂಬುದನ್ನು ಇಂತಹ ಸಂಸ್ಥೆಗಳು ಅರ್ಥ ಮಾಡಿಕೊಳ್ಳಬೇಕು. ನಾಗರಿಕರು ಬದುಕುಳಿದರೆ ಮಾತ್ರ ಕರ್ತವ್ಯ, ಹಕ್ಕುಗಳನ್ನು ಚಲಾಯಿಸಲು ಸಾಧ‍್ಯ ಎಂದು ಆಕ್ರೋಶ ಹೊರಹಾಕಿದೆ.