ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದದಿಂದ ನಿಂದನೆ, ಅಕ್ರಮಕೂಟ ರಚನೆ ಹಿನ್ನಲೆಯಲ್ಲಿ ಪ್ರಕರಣ ದಾಖಲು.ಕೊಪ್ಪಳ ಬಂದ್ ವೇಳೆ ಠಾಣೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದ ಸಂಸದ ಸಂಗಣ್ಣ ಕರಡಿ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಒಟ್ಟು 38 ಜನರ ವಿರುದ್ಧ ದೂರು ದಾಖಲಾಗಿದೆ.
ಠಾಣೆಗೆ ನುಗ್ಗಿ ಪಿಐ ರವಿ ಉಕ್ಕುಂದ್ ಹಾಗೂ ಡಿವೈಎಸ್ ಪಿ ಎಂ.ಎಸ್.ಸಂದಿಗವಾಡ ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಡಿವೈವೆಸ್ಪಿಗೆ ಎಳೆದಾಡಿ ಹಲ್ಲೆ ಮಾಡಲು ಯತ್ನಿಸಿದ್ದರು. ಸಂಸದ ಕರಡಿ ಸಂಗಣ್ಣ , ಪುತ್ರ ಅಮರೇಶ ಕರಡಿ ಸೇರಿದಂತೆ 38 ಜನರ ಮೇಲೆ 143,147,341,353,504 ಸೆಕ್ಷನ್ ಅಡಿ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.