ಮಂಡ್ಯದಲ್ಲಿ ಜಾತಿ ರಾಜಕೀಯ ಹೆಚ್ಚಾಗಿದೆ- ಆರ್.ಅಶೋಕ್ ಆರೋಪ

ಶುಕ್ರವಾರ, 5 ಏಪ್ರಿಲ್ 2019 (08:06 IST)
ಬೆಂಗಳೂರು : ಜೆಡಿಎಸ್ ಜಾತ್ಯಾತೀತ ಅಲ್ಲ, ಜಾತಿ ತಿಥಿ ಪಕ್ಷ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್‍ ನವರು ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಸಾಕಷ್ಟು ಒಕ್ಕಲಿಗ ನಾಯಕರು ಬಂದು ಹೋಗಿದ್ದಾರೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರಿಗಿಂತ ದೊಡ್ಡ ಒಕ್ಕಲಿಗ ನಾಯಕರನ್ನು ರಾಜ್ಯ ಕಂಡಿಲ್ಲ. ಅವರು ಒಂದು ದಿನವೂ ಜಾತಿ ರಾಜಕಾರಣ ಮಾಡಿಲ್ಲ.


ಎಸ್.ಎಂ.ಕೃಷ್ಣ ಅವರು ಸಂಕಷ್ಟದಲ್ಲಿ ಸಿಎಂ ಆಗಿದ್ದರೂ ಜಾತಿ ರಾಜಕಾರಣ ಮಾಡಿಲ್ಲ. ಆದರೆ  ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದವರು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಅವರಿಗೆ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಬಾರದು ಎನ್ನುವುದು ಗೊತ್ತಿಲ್ಲದೇ ಇರುವುದು ವಿಪರ್ಯಾಸ ಎಂದು ಹೇಳಿದ್ದಾರೆ


 

ಮಂಡ್ಯದಲ್ಲಿ ಜಾತಿ ರಾಜಕೀಯ ಹೆಚ್ಚಾಗಿದೆ. ಮೈತ್ರಿ ಅಭ್ಯರ್ಥಿಯ ಪರ ನಡೆದ ಪ್ರಚಾರದ ವೇಳೆ ನಾಯ್ಡು ಜನಾಂಗವನ್ನು ಅಪಮಾನ ಮಾಡಿದ್ದಾರೆ. ಜೆಡಿಎಸ್‍ನವರು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕರೆದು ಹಾರ ಹಾಕಿ, ಸನ್ಮಾನಿಸಿ ಅಪ್ಪಿಕೊಳ್ಳುತ್ತಾರೆ. ಚಂದ್ರಬಾಬು ಕೂಡ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ರಾಜಕಾರಣ ಮಾಡಿದವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಕ್ಕ ಉತ್ತರ ನೀಡಿ, ಮೈತ್ರಿ ನಾಯಕರ ಬೆವರಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ