ಮೋದಿ ಖುರ್ಚಿ ಮೇಲೆ ಕರ್ಚೀಫ್ ಹಾಕ್ತಾರಾ?

ಬುಧವಾರ, 3 ಏಪ್ರಿಲ್ 2019 (15:44 IST)
ಕಾಂಗ್ರೆಸ್ ನಲ್ಲೂ ಹಾಗೆ ಆಗಿದೆ. ಅದು ಒಂದು ವಂಶದವರ ಅನುವಂಶಿಕ ಸ್ವತ್ತಾಗಿದೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಆರೋಪ ಮಾಡಿದ್ದಾರೆ.

ಅನುವಂಶಿಕ‌ ರಾಜಕಾರಣವನ್ನು ನಾನು ವಿರೋಧಿಸಿಕೊಂಡು ಬಂದಿದ್ದೇನೆ. ಅರ್ಹತೆ ಇದ್ದೋ ಇಲ್ಲದೆಯೋ ತಾವು ಒಂದು ವಂಶದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ದೇಶದ ನಾಯಕತ್ವ ವಹಿಸೋದು ಸರಿ ಕಾಣಲ್ಲ. ಅರ್ಹತೆ ಇದ್ದರೆ ಪರವಾಗಿಲ್ಲ. ಆದರೆ ಅರ್ಹತೆ ಇಲ್ಲದೇ ಇದ್ದರೆ? ಕಾಂಗ್ರೆಸ್ ನಲ್ಲೂ ಹಾಗೆ ಆಗಿದೆ. ಅದು ಒಂದು ವಂಶದವರ ಅನುವಂಶಿಕ ಸ್ವತ್ತಾಗಿದೆ. ಹೀಗಂತ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ನಾನು ಬಿಜೆಪಿ ಸೇರಲು ಮೂಲ ಕಾರಣ ನರೇಂದ್ರ ಮೋದಿ. ಅವರು ಯಾವ ಪರಿವಾರವನ್ನೂ ಪೋಷಣೆ  ಮಾಡುತ್ತಿಲ್ಲ. ಅವರದ್ದು ಅನುವಂಶಿಕ ರಾಜಕಾರಣ ಅಲ್ಲ. ಗುಜರಾತಿನಿಂದ ಒಬ್ಬರೇ ಬಂದರು. ದೇಶದ ನಾಯಕತ್ವ ವಹಿಸಿಕೊಂಡರು. ಮತ್ತೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ. ಖುರ್ಚಿ ಮೇಲೆ ಕರ್ಚೀಫ್ ಹಾಕುವ ಸ್ವಭಾವ ಅವರದ್ದಲ್ಲ. ಹಾಗಾಗಿ ಅವರಿಂದ ಆಕರ್ಷಿತನಾಗಿ ಬಿಜೆಪಿ ಸೇರಿದೆ ಎಂದರು.

ನಾನೇ ಬಿಜೆಪಿಯವರಿಗೆ ನನ್ನ ಸೇವೆ ಬಳಕೆ ಮಾಡಿಕೊಳ್ಳಿ, ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಮನವಿ ಮಾಡಿಕೊಂಡೆ. ಇಲ್ಲಿ ಯಾರ ಒತ್ತಡವೂ ಇಲ್ಲ. ಹೀಗಂತ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ