ಡ್ರಗ್ ಪೆಡ್ಲರ್ ನ ಖಾತೆಯಲ್ಲಿದ್ದ ಹಣ ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರು :ಕೆಲ ದಿನಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ಮಾದಕವಸ್ತುಗಳನ್ನು ಮಾರಾಟಮಾಡುತ್ತಿದ್ದ ಆರೋಪದ ಮೇಲೆ ಪೀಟರ್ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಆಗ ಈತನ ಬಳಿ 35 ಕ್ಕೂ ಹೆಚ್ಚು ಪಾಸ್ ಬುಕ್ ಗಳು ಮತ್ತು ಪಾಸ್ ಪೋರ್ಟ್‌ಗಳೂ ಪತ್ತೆಯಾಗಿತ್ತು. : ಇದೇ ಮೊದಲ ಬಾರಿಗೆ ಕೇಂದ್ರ ಅಪರಾಧ ದಳದ ಪೊಲೀಸರು ಡ್ರಗ್ ದಂಧೆಕೋರನೊಬ್ಬನನ್ನು ಬಂಧಿಸಿ ಎನ್‌ಡಿಪಿಎಸ್ ಕಾಯಿದೆ 5(A) ಅಡಿಯಲ್ಲಿ ಆತನ ಖಾತೆಯಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪೀಟರ್ ಇಕೆಡಿ ಬಿಲೋನ್ವು ಎಂಬ ಆಫ್ರಿಕಾ ದೇಶದ ವಾಸಿ ಬಂಧಿತ ಆರೋಪಿಯಾಗಿದ್ದು, ಈತನ ಖಾತೆಯಿಂದ 12 ಲಕ್ಷ ರೂ. ಹಣವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. Safema ಕಾಯಿದೆಯಡಿಯಲ್ಲಿ ಆತನ ಹಣವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.