ನಗರದಲ್ಲಿ ಸರಣಿ ಹಬ್ಬಗಳ ಆಚರಣೆ

ಬುಧವಾರ, 18 ಆಗಸ್ಟ್ 2021 (21:44 IST)
ಬೆಂಗಳೂರು: ನಗರದಲ್ಲಿ ಸರಣಿ ಹಬ್ಬಗಳ ಆಚರಣೆ ಹಿನ್ನೆೆಲೆಯಲ್ಲಿ ಜನಸಂದಣಿ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹರಡದಂತೆ ಕ್ರಮವಹಿಸಲು ಪಾಲಿಕೆ ಮುಂದಾಗಿದೆ. ಈ ನಿಟ್ಟಿಿನಲ್ಲಿ ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಹಲವು ಕಟ್ಟುನಿಟ್ಟಾಾಗಿ ನಿರ್ಬಂಧ ವಿಧಿಸಿ, ಆದೇಶ ಹೊರಡಿಸಿದೆ.
ಆಗಸ್‌ಟ್‌ ಹಾಗೂ ಅಕ್ಟೋೋಬರ್ ತಿಂಗಳಲ್ಲಿ ಮೊಹರಂ, ವರಮಹಾಲಕ್ಷ್ಮೀ, ಶ್ರೀಕೃಷ್ಣ ಜಾನ್ಮಾಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಇನ್ನಿಿತರೆ ಹಬ್ಬಗಳ ಸಾಲು ಬರುತ್ತಿಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆೆ ಪ್ರದೇಶಗಳಲ್ಲಿ ಜನದಟ್ಟಣೆ ಉಂಟಾಗಲಿದೆ. ಇದನ್ನು ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿಿನ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಪಾಲಿಕೆ ಸೂಚನೆ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪಾಲಿಕೆ ವ್ಯಾಾಪ್ತಿಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆೆಗಳಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ವಿವಿಧ ಹಂತಗಳಲ್ಲಿ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಮಾರುಕಟ್ಟೆೆಗಳಲ್ಲಿ ಹಲವು ಕ್ರಮಗಳನ್ನು ಕಟ್ಟುನಿಟ್ಟಾಾಗಿ ಜಾರಿಗೊಳಿಸಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದ್ದಾಾರೆ.
 
ಧ್ವನಿವರ್ಧಕದ ಮೂಲಕ ಜಾಗೃತಿ:
ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ಪಾಲಿಕೆಯ ಆರೋಗ್ಯ ವೈದ್ಯಾಾಧಿಕಾರಿಗಳು, ತಮ್ಮ ವ್ಯಾಾಪ್ತಿಿಯಲ್ಲಿ ಪ್ರಮುಖ ಮಾರುಕಟ್ಟೆೆಗಳಲ್ಲಿ ಒಂದು ವಾಹನ ಬಳಸಿಕೊಂಡು ಜಾಗೃತಿ ಮೂಡಿಸಬೇಕು. ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಅಗತ್ಯವಾಗಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆೆ ಸಂದೇಶ ಹಾಗೂ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ತಿಳಿಸಬೇಕು ಎಂದು ಹೇಳಿದ್ದಾಾರೆ.
 
ನಿಯಮ ಉಲ್ಲಂಘನೆಗೆ 250 ರೂ. ದಂಡ:
ಪಾಲಿಕೆಯ ಮುಖ್ಯ ಮಾರ್ಷಲ್‌ಗಳು, ಈಗಾಗಲೆ ಪಾಲಿಕೆಯ ಎಂಟು ವಲಯದಲ್ಲಿ ಮಾರ್ಷಲ್‌ಗಳಿಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಬಳಸಿಕೊಂಡು ಮುಂಜಾಗ್ರತಾ ಕ್ರಮಗಳ ಬಗ್ಗೆೆ ಅರಿವು ಮೂಡಿಸಲು ಕ್ರಮವಹಿಸಬೇಕು. ಮಾಸ್‌ಕ್‌ ಧರಿಸುವುದು ಕೊರೊನಾ ಸೋಂಕು ತಡೆಗಟ್ಟುವ ಅತ್ಯಂತ ಪ್ರಮುಖ ಕ್ರಮವಾಗಿದೆ. ಹೀಗಾಗಿ, ಪ್ರಮುಖ ಮಾರುಕಟ್ಟೆೆಗಳಲ್ಲಿ ಮಾಸ್‌ಕ್‌ ಧರಿಸದಿರುವವರಿಗೆ(ಸಾರ್ವಜನಿಕರಿಗೆ ಮತ್ತು ವರ್ತಕರಿಗೆ) ಕಡ್ಡಾಾಯವಾಗಿ 250 ರೂ. ದಂಡವನ್ನು ವಿಧಿಸಬೇಕು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆೆ ಮಾರ್ಷಲ್‌ಗಳು, ಹಿರಿಯ ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ಅಗತ್ಯ ಕ್ರಮವಹಿಸಬೇಕು. ಸಾಮಾಜಿಕ ಅಂತರ ಪಾಲಿಸದ ವರ್ತಕರಿಗೆ ಮತ್ತು ಸಾರ್ವಜನಿಕರಿಂದ 250 ರೂ. ದಂಡ ವಸೂಲಿ ಮಾಡಬೇಕು ಎಂದು ತಾಕೀತು ಮಾಡಿದ್ದಾಾರೆ.
 
ಲಸಿಕೆ ಪಡೆದಿರುವ ಬಗ್ಗೆೆ ಮಾಹಿತಿ:
ಅಂಗಡಿಗಳು, ರೆಸ್ಟೋೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರು, ತಾವು ಸೇರಿದಂತೆ ಸಿಬ್ಬಂದಿ ಕಡ್ಡಾಾಯವಾಗಿ ಕೊರೊನಾ ಲಸಿಕೆ(ಕನಿಷ್ಠ ಮೊದಲನೇ ಡೋಸ್) ಪಡೆದಿರುವುದರ ಬಗ್ಗೆೆ ಖಚಿತಪಡಿಸಿಕೊಳ್ಳಬೇಕು. ಜತೆಗೆ, ಸಿಬ್ಬಂದಿ ಮತ್ತು ಸಾರ್ವಜನಿಕರು ಮಾಸ್‌ಕ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆೆ ಗಮನಿಸಬೇಕು ಎಂದು ಹೇಳಿದ್ದಾಾರೆ.
 
ಕರ್ಫ್ಯೂೂ ವೇಳೆ ವಾಣಿಜ್ಯ ಮಳಿಗೆ ಬಂದ್:
ಮಾರ್ಷಲ್‌ಗಳು, ಹಿರಿಯ ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ಅಂಗಡಿ,  ರೆಸ್ಟೋೋರೆಂಟ್, ಮಾಲ್ ಮತ್ತು ಮಾರುಕಟ್ಟೆೆ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಕೋವಿಡ್ -19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಿರುವ ಪರಿಶೀಲಿಸಬೇಕು. ನಿಗಧಿಪಡಿಸಿರುವ ಕರ್ಫ್ಯೂೂ ಸಮಯದಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಿಸಬೇಕು. ಯಾವುದೇ ವ್ಯಕ್ತಿಿ ಅಥವಾ ಸಂಸ್ಥೆೆಯು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ದಂಡದ ಜತೆಗೆ, ವಿಪತ್ತು ನಿರ್ವಹಣಾ ಕಾಯಿದೆ 2005ರಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ