ಎಲ್ಲೆಡೆ ವಿಶ್ವಸ್ತನ್ಯಪಾನದಿನ ಆಚರಣೆ- ಸ್ತನ್ಯಪಾನದ ಬಗ್ಗೆ ತಾಯಂದಿರರಿಗೆ ಅರಿವು

ಸೋಮವಾರ, 1 ಆಗಸ್ಟ್ 2022 (20:25 IST)
ಇಂದು ಎಲ್ಲೆಡೆ ವಿಶ್ವ ಸ್ತನ್ಯಪಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸ್ತನ್ಯಪಾನ ಮಾಡುವುದರ ಮಹತ್ವ ಏನು ಎಂಬುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಸ್ತನ್ಯಪಾನದ ಮಹತ್ವದ ಜೊತೆಗೆ " ಹ್ಯೂಮನ್ ಮಿಲ್ಕ್ ಬ್ಯಾಂಕ್" ಮತ್ತು ಮಿಲ್ಕ್ ಬ್ಯಾಂಕ್ ಗೆ ಹಾಲು ದಾನ‌ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಆಸ್ಪತ್ರೆ ಮುಂದಾಗಿದೆ. 
 
 
ಕಳೆದ 5 ವರ್ಷದಿಂದ ಮಿಲ್ಕ್ ಬ್ಯಾಂಕ್ ನಲ್ಲಿ ಹಾಲನ್ನು ಶೇಖರಿಸಿ ಅಗತ್ಯ ಇರುವಂತಹವರಿಗೆ ಅದನ್ನು ನೀಡಲಾಗುತ್ತಿದೆ.ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ " ಹ್ಯೂಮನ್ ಮಿಲ್ಕ್ ಬ್ಯಾಂಕ್ " ಸಹ ಇದೆ.  ಇಲ್ಲಿ ತಾಯಿಯ ಎದೆಹಾಲನ್ನು ಸಂಗ್ರಹಿಸಿ ಒಂದು ದಿನ ಫ್ರಿಜ್ ನಲ್ಲಿ ಇರಿಸಿ ನಂತರ ಅದನ್ನು ಪರೀಕ್ಷೆ ಗೆ ಕಳುಹಿಸಿ ಇದು ಮಗುವಿಗೆ ನೀಡಲು ಯೋಗ್ಯ ಎಂದು ಪರೀಕ್ಷಾ ವರದಿ‌ ಬಂದ ನಂತರ ಅಗತ್ಯವಿರುವ ಶಿಶುವಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಬೇರೆ ಆಸ್ಪತ್ರೆಯಲ್ಲಿ ಇರುವಂತಹ ತಾಯಂದಿರು ಕೂಡ ಮಿಲ್ಕ್ ಬ್ಯಾಂಕ್ ಗೆ ಹಾಲನ್ನು ದಾನ ಮಾಡಲು ಆಸ್ಪತ್ರೆ ಅವಕಾಶ ನೀಡುತ್ತಿದೆ.
 
 ಒಮ್ಮೆ ಸಂಗ್ರಹಿಸಿದ ಹಾಲನ್ನು 6-8 ತಿಂಗಳುಗಳ ಕಾಲ ಉಪಯೋಗಿಸಲು ಅವಕಾಶವಿದೆ. ಕಳೆದ ೫ ವರ್ಷಗಳಿಂದ ಇಲ್ಲಿ ಹ್ಯೂಮನ್ ಮಿಲ್ಕ್ ಸಂಗ್ರಹಿಸಲಾಗುತ್ತಿದೆ. ಮಗು ಹುಟ್ಟಿದ ಮೊದಲ 7 ದಿನಗಳು ತಾಯಿಯ ಹಾಲು ಅತ್ಯಂತ ಮಹತ್ವದು. ಈ ಅವಧಿಯ ಹಾಲನ್ನು ಗೋಲ್ಡನ್ ಮಿಲ್ಕ್ ಎನ್ನಲಾಗುತ್ತದೆ. ಈ ಸಮಯದಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ ಅನ್ನು ಬ್ಯಾಂಕ್ ನಲ್ಲಿ ಸಂಗ್ರಹಿಸಿ ಅಗತ್ಯ ಇರುವಂತಹ ಮಗುವಿಗೆ ನೀಡಲಾಗುತ್ತದೆ. ಇದರಿಂದ ತಾಯಿಯ ಹಾಲಿನಿಂದ ದೂರ ಉಳಿದ ಮಕ್ಕಳಿಗೂ ಸಹ ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ