ಸಿಇಟಿ ಫಲಿತಾಂಶ ಮೊದಲು ಬರುತ್ತಾ ದ್ವಿತೀಯ ಪಿಯುಸಿ ಪರೀಕ್ಷೆ 2 ಫಲಿತಾಂಶ ಮೊದಲಾ: ಇಲ್ಲಿದೆ ಉತ್ತರ

Krishnaveni K

ಶನಿವಾರ, 12 ಏಪ್ರಿಲ್ 2025 (17:13 IST)
ಬೆಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆ ರಿಸಲ್ಟ್ ಮೊದಲು ಬರುತ್ತಾ, ದ್ವಿತೀಯ ಪಿಯು ಪರೀಕ್ಷೆ 2 ಫಲಿತಾಂಶ ಮೊದಲು ಬರುತ್ತಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ದ್ವಿತೀಯ ಪಿಯುಸಿ ಪರೀಕ್ಷೆ 1 ರ ಫಲಿತಾಂಶ ಮೊನ್ನೆಯಷ್ಟೇ ಬಂದಿತ್ತು. ಇದೀಗ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಏಪ್ರಿಲ್ 16 ಮತ್ತು 17 ಸಿಇಟಿ ಪರೀಕ್ಷೆ ನಡೆಯಲಿದೆ. ಇದೀಗ ಸಿಇಟಿ ಫಲಿತಾಂಶ ಯಾವಾಗ ಎನ್ನುವ ಕುತೂಹಲವೂ ವಿದ್ಯಾರ್ಥಿಗಳಲ್ಲಿದೆ.

ವಿಶೇಷವಾಗಿ ದ್ವಿತೀಯ ಪಿಯು ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ಎರಡನೇ ಪರೀಕ್ಷೆಗೆ ಸಿದ್ಧತೆ ಮಾಡುವವರಿಗೆ ಮೊದಲು ಯಾವ ಫಲಿತಾಂಶ ಬರುತ್ತದೆ ಎಂಬ ಆತಂಕವಿದೆ. ಸಿಇಟಿ ಪರೀಕ್ಷೆ ಫಲಿತಾಂಶ ಮೊದಲು ಬಂದರೆ ತಮಗೆ ಸೀಟು ಸಿಗಲು ಕಷ್ಟವಾಗಬಹುದು ಎಂಬ ಆತಂಕವಿದೆ.

ಇದಕ್ಕೀಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ದ್ವಿತೀಯ ಪಿಯು ಪರೀಕ್ಷೆ 2 ಫಲಿತಾಂಶ ಬಂದ ಬಳಿಕವಷ್ಟೇ ಸಿಇಟಿ ಪರೀಕ್ಷೆ ಫಲಿತಾಂಶ ಬರಲಿದೆ. ಹೀಗಾಗಿ ದ್ವಿತೀಯ ಪಿಯು ಪರೀಕ್ಷೆ 2 ಬರೆಯುತ್ತಿರುವ ವಿದ್ಯಾರ್ಥಿಗಳು ನಿರಾಳವಾಗಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ