ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೇಗಿದ್ದಾರೆ? ಇಂದು ವೈದ್ಯರಿಂದ ಸುದ್ದಿಗೋಷ್ಠಿ ಸಾಧ್ಯತೆ
ದರ್ಶನ್ ಜತೆಗೆ ಕಾರಿನಲ್ಲಿದ್ದು, ಗಾಯಗೊಂಡಿದ್ದ ನಟ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ದೇವರಾಜ್ ನಿನ್ನೆಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ದರ್ಶನ್ ಗೆ ಇನ್ನೂ ಚಿಕಿತ್ಸೆ ಮುಂದುವರಿದಿದೆ.
ಕೈ ಶಸ್ತ್ರ ಚಿಕಿತ್ಸೆಗೊಳಗಾಗಿರುವ ದರ್ಶನ್ ಇಂದೂ ಡಿಸ್ಚಾರ್ಜ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ನಡುವೆ ದರ್ಶನ್ ಆರೋಗ್ಯ ಸ್ಥಿತಿ ಬಗ್ಗೆ ಇಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.