ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಯಶಸ್ವಿಯಾಗಿ ತಿರಂಗಾ ಯಾತ್ರೆ ಮಾಡಲಾಗಿದೆ. ಆದರೆ ಪಾ"ಕೈ"ಸ್ತಾನ ಆಡಳಿತವಿರುವ ಕರ್ನಾಟಕದ ಚಾಮರಾಜಪೇಟೆಯಲ್ಲಿ ತಿರಂಗಾ ಯಾತ್ರೆ ಮಾಡಲು ಸಿದ್ದರಾಮಯ್ಯ
ಸರ್ಕಾರ ಅನುಮತಿ ನೀಡಿಲ್ಲ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಈ ಬಗ್ಗೆ ಬಿಜೆಪಿ ತನ್ನ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಪಾಕ್ ಪರ ಘೋಷಣೆ ಕೂಗುವವರನ್ನು ರಕ್ಷಣೆ ಮಾಡುವ ಕಾಂಗ್ರೆಸ್ ಸರ್ಕಾರ, ತಿರಂಗಾ ಯಾತ್ರೆಗೆ ಅವಕಾಶ ಮಾಡಿಕೊಟ್ಟರೆ, ವೋಟ್ ಬ್ಯಾಂಕ್ ಎಲ್ಲಿ ಮುನಿಸಿಕೊಳ್ಳುತ್ತೆ ಎನ್ನುವ ಭಯದಲ್ಲಿದೆ.
ಚಾಮರಾಜಪೇಟೆ ಪಾಕಿಸ್ತಾನದಲ್ಲಿದೆಯೋ ಭಾರತದಲ್ಲಿದೆಯೋ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕಿದೆ ಎಂದರು.
ಚಾಮರಾಜನಗರ ಪೇಟೆಯಲ್ಲಿ ತಿರಂಗಾ ಯಾತ್ರೆಗೆ ಅನುಮತಿ ನೀಡದಿರುವ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.