ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ

ಮಂಗಳವಾರ, 7 ಫೆಬ್ರವರಿ 2023 (20:10 IST)
ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ 2023ರ ರಾಜ್ಯ ಚುನಾವಣೆಗೆ ಮತ್ತಷ್ಟು ಶಕ್ತಿ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಚಿಹ್ನೆಗೆ ಈ ಹಿಂದೆ ಇದ್ದ ಮೂರು ಗೆರೆಗಳ ಬದಲಾಗಿ ನಾಲ್ಕನೇ ಗೆರೆಯನ್ನು ಸೇರಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಅದೃಷ್ಟದ ಕಾರಣಕ್ಕೆ ಕೈ ರೇಖೆಯನ್ನೇ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವಾರು ರಾಜಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್ 1980 ರಲ್ಲಿ ಹಸ್ತದ ಗುರುತು ಚಿಹ್ನೆಯಾಗಿ ನಿಗದಿ ಆಗಿತ್ತು.ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು,ಈಗ ಡಿಕೆಶಿ ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ.ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ಭಾಗಕ್ಕೆ ತಲುಪುತ್ತದೆ.ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ ಮಾಡಿಲಾಗಿದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ