ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ. ಟ್ವಿಟರ್ ಮಂದಿನ ದಿನಗಳಲ್ಲಿ ಪೇವಾಲ್ ಸಾಮಾಜಿಕ ಜಾಲತಾಣದ ಸ್ವರೂಪ ಪಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಸಾಂದರ್ಭಿಕ ಬಳಕೆದಾರರಿಗೆ ಟ್ವಿಟ್ಟರ್ ಸದಾ ಉಚಿತವಾಗಿರುತ್ತದೆ. ವಾಣಿಜ್ಯ ಅಥವಾ ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿರುತ್ತದೆ. ಆದರೆ ಸರ್ಕಾರ ಮತ್ತು ವಾಣಿಜ್ಯ ಬಳಕೆದಾರರಿಗೆ ತುಸು ಶುಲ್ಕ ವಿಧಿಸಬೇಕಾಗುತ್ತದೆ