ಚಾರ್ಮಾಡಿ ಘಾಟಿಯಲ್ಲಿ ಮುಂದುವರಿದ ಪ್ರಯಾಣಿಕರ ಪರದಾಟ
ನಿನ್ನೆ ಸಂಜೆಯಿಂದಲೇ ಇಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳಲ್ಲಿರುವ ಪ್ರಯಾಣಿಕರು ಹಸಿವು, ಬಾಯಾರಿಕೆಗಳಿಂದ ಬಳಲುತ್ತಿದ್ದಾರೆ. ವಾಹನಗಳಲ್ಲಿರುವ ಮಕ್ಕಳು ಪೋಷಕರ ಬಳಿ ತಿಂಡಿ-ಹಾಲು ಬೇಕೆಂದು ರಚ್ಚೆ ಹಿಡಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಈಗಾಗಲೇ ತೆರವು ಕಾರ್ಯಾಚಾರಣೆ ಭರದಿಂದ ಸಾಗುತ್ತಿದ್ದು, ಎರಡು ಜೆಸಿಬಿಗಳನ್ನು ಬಳಸಿ ರಸ್ತೆ ತೆರವುಗೊಳಿಸಲಾಗುತ್ತಿದೆ. ಸಿಬ್ಬಂದಿ ಜತೆಗೆ ಸ್ಥಳೀಯರೂ ಕೈಗೂಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.