ಕರ್ನಾಟಕ ಚುನಾವಣೆ: ಮತದಾನ ಜನರಿಗೆ ತಂದ ಸಂಕಟವೇನು ಗೊತ್ತಾ?!
ಶನಿವಾರ ಮತದಾನ ಮಾಡಲು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಮೆಜೆಸ್ಟಿಕ್ ತೆರಳುವ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಇಂದು ನಾಳೆ ಇದೇ ಸಮಸ್ಯೆ ಗ್ಯಾರಂಟಿ. ಇದೂ ಸಾಲದೆಂಬಂತೆ ನಿನ್ನೆ ರಾತ್ರಿ ನಗರದಾದ್ಯಂತ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಟ್ರಾಫಿಕ್ ಸಮಸ್ಯೆ ಮುಗಿಲು ಮುಟ್ಟಿತ್ತು.
ಇದಲ್ಲದೆ ಪಾನಪ್ರಿಯರೂ ಇಂದೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ತಮ್ಮ ತಮ್ಮ ವಾಹನಗಳಲ್ಲಿ ಈ ವೀಕೆಂಡ್ ಕಳೆಯಲು ಬೇಕಾದಷ್ಟು ಮದ್ಯ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣೆಯಾಗಿರುವುದರಿಂದ ಎರಡು ದಿನ ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಬೀಗ ಬೀಳಲಿದೆ. ಈ ಕಾರಣಕ್ಕೆ ಈ ಮುಂಜಾಗ್ರತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.