Chhattisgarh Naxal Encounter: ಐವರು ನಕ್ಸಲರ ಹತ್ಯೆ

Sampriya

ಶನಿವಾರ, 7 ಜೂನ್ 2025 (17:38 IST)
Photo Courtesy X
ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಎನ್‌ಕೌಂಟರ್‌ಗಳಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದಾರೆ.

ಈ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಸಂಘಟನೆಯ ಉನ್ನತ ನಾಯಕರಾದ ತೆಲಂಗಾಣ ರಾಜ್ಯ ಸಮಿತಿಯ ವಿಶೇಷ ವಲಯ ಸಮಿತಿ ಸದಸ್ಯ ಭಾಸ್ಕರ್‌ ಹಾಗೂ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ನರಸಿಂಹ ಚಲಂ ಅಲಿಯಾಸ್‌ ಸುಧಾಕರ್‌ ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಭಾಸ್ಕರ್‌ ಸುಳಿವು ನೀಡಿದವರಿಗೆ ₹45 ಲಕ್ಷ ಬಹುಮಾನವನ್ನು ಛತ್ತೀಸಗಢ ಹಾಗೂ ತೆಲಂಗಾಣದಲ್ಲಿ ಘೋಷಿಸಲಾಗಿತ್ತು. ಚಲಂ ಸುಳಿವು ನೀಡಿದವರಿಗೆ ಛತ್ತೀಸಗಢ ಸರ್ಕಾರ ₹40 ಲಕ್ಷ ಬಹುಮಾನವನ್ನು ಘೋಷಿಸಿತ್ತು.

ಜೂನ್‌ 4ರಿಂದ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ. ಎರಡು ಎಕೆ–47 ರೈಫಲ್‌ಗಳು ಸೇರಿದಂತೆ ಅಪಾರ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೃತಪಟ್ಟ ನಕ್ಸಲರಲ್ಲಿ ಇಬ್ಬರು ಮಹಿಳೆಯರ ಶವ ದೊರೆತಿದ್ದು, ಅವರ ಗುರುತು ಪತ್ತೆಯಾಗಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ