ಮಕ್ಕಳು, ಗಂಡನನ್ನೇ ಮನೆಯಿಂದ ಹೊರದಬ್ಬಿದ ಹೆಂಡತಿ

ಸೋಮವಾರ, 6 ಜನವರಿ 2020 (20:00 IST)

ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ. ಇದೀಗ ಪತ್ನಿಯೊಬ್ಬಳು ಗಂಡನೊಂದಿಗೆ ಜಗಳ ತೆಗೆದು ತನ್ನ ಮಕ್ಕಳು, ಗಂಡನನ್ನೇ ಮನೆಯಿಂದ ಹೊರದಬ್ಬಿದ್ದಾಳೆ.
 


12 ಹಾಗೂ 15 ವರ್ಷದ ಹೆಣ್ಣು ಮಕ್ಕಳು ಸದ್ಯ ಮಕ್ಕಳ ಸಹಾಯವಾಣಿಯವರು ಆಶ್ರಯ ವ್ಯವಸ್ಥೆ ಕಲ್ಪಿಸಿದ್ದಾರೆ. 14 ವರ್ಷದ ಮಗ ತಂದೆಯೊಂದಿಗೆ ಇದ್ದಾನೆ. ಇವರೆಲ್ಲರನ್ನು ಹೆಂಡತಿ ಮನೆಯಿಂದ ಹೊರಹಾಕಿದ್ದಾಳೆ.

ಪೊಲೀಸರು, ಅಧಿಕಾರಿಗಳು, ಸಂಬಂಧಿಕರು ಎಷ್ಟೇ ಹೇಳಿದರೂ ಹೆಂಡತಿಯು ತನ್ನ ಗಂಡ, ಮೂರು ಮಕ್ಕಳನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಪೊಲೀಸರು ದಂಪತಿಯ ಮನವೊಲಿಸುವಲ್ಲಿ ತೊಡಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ