ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ನಗರದ ಗರುಡಾ ಮಾಲ್ ಸನ್ನದ್ಧವಾಗಿದ್ದು, ಜನವರಿ 2 ರ ವರೆಗೆ ನಗರದ ಜನರಿಗೆ 10 ದಿನಗಳ ಕಾಲ ಕೇಕ್ ಶೋ ಮತ್ತು ಕ್ರಿಸ್ಮಸ್ ಸಂತೆ ಕೈ ಬೀಸಿ ಕರೆಯುತ್ತಿದೆ. ಗರುಡಾ ಮಾಲ್ ನ 16 ನೇ ವರ್ಷದ ಪ್ರದರ್ಶನದಲ್ಲಿ ಮಧ್ಯಕಾಲೀನ ಯುಗದ ಕೋಟೆಯನ್ನು ಪ್ರತಿಬಿಂಬಿಸುವ “ಮಿಡಿವಲ್ ಕ್ಯಾಸಲ್” ಕೇಕ್ ಶೋ ಆಕರ್ಷಣೆಯಾಗಿದೆ. 16 ಅಡಿ ಎತ್ತರದ ಮತ್ತು 16 ಮತ್ತು 16 ಅಡಿ ವಿಸ್ತೀರ್ಣದ ಕೇಕ್ ಶೋ ಪ್ರತಿಕೃತಿ ಗಮನ ಸೆಳೆಯುತ್ತಿದೆ. ಮೊಂಬತ್ತಿಗಳ ಅಲಂಕಾರದಿಂದ ಮಿಡೀವಲ್ ಕ್ಯಾಸಲ್ ಕೋಟೆ ಕಂಗೊಳಿಸುತ್ತಿದೆ.
ಚಿತ್ರನಟಿ, ರಂಗಿ ತರಂಗ ಚಿತ್ರದ ಖ್ಯಾತಿಯ ನಾಯಕಿ ರಾಧಿಕ ನಾರಾಯಣ್ ಕೇಕ್ ಶೋ ಉದ್ಘಾಟಿಸಿದರು. ವರ್ಷಾಂತ್ಯದಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಈ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ವೈಭವದ ಮೆಲಕು ಹಾಕುತ್ತ ‚ಮಿಡೀವಲ್ ಕ್ಯಾಸಲ್ನ ವಿಧವಿಧ ಕೇಕುಗಳ ಮಾದರಿಯನ್ನು ಆಸ್ವಾದಿಸಲು ವೇದಿಕೆಯಾಗಿದೆ.‚ಮಿಡೀವಲ್ ಕ್ಯಾಸಲ್‛ 16 ಎತ್ತರ 16 ಉದ್ದ 12 ಅಗಲದ ಕ್ಯಾಸಲ್ ಮಾಲ್‍ನ ಒಳಗೆ ಬರಲಿದೆ. ಇವೆಲ್ಲದರ ಜೊತೆಗೆ ಏಳು ಅಡಿ ಎತ್ತರದ ನಾಲ್ಕು ಕೋಟೆ ಬುರುಜುಗಳು, ಸಾಂತಾಕ್ಲಾಸ್ ಮತ್ತು ಮಿಕ್ಕಿಮೌಸ್ ಮಾದರಿಯ ಕೇಕುಗಳು ಮಾಲ್‍ನ ವಿವಿಧ ಅಂತಸ್ತುಗಳಲ್ಲಿ ಅನಾವರಣಗೊಂಡಿವೆ. ಕ್ರಿಸ್ ಮಸ್ ಕೇಕ್ ನಲ್ಲಿರುವ ಚೆರ್ರಿ ಯೂರೋಪಿಯನ್ ಶೈಲಿಯದ್ದಾಗಿದೆ. ಗ್ರಾಹಕರು ಕ್ರಿಸ್ಮಸ್ ಕುರಿತ ಗುಡಿಗಳನ್ನು ಸಹ ಮನೆಗೆ ಕೊಂಡೊಯ್ಯಬಹುದಾಗಿದೆ.
ಕೇಕ್ ಕಲಾವಿದರಾದ ಷರೀಪ್, ಫಾತಿಮಾ ಸೇರಿ 12 ಮಂದಿ ಆಯ್ಕೆಯಾದರು ಮಿಡಿವಲ್ ಕೇಕ್ ಅನ್ನು ಕೇವಲ 3 ದಿನಗಳಲ್ಲಿ ನಿರ್ಮಿಸಿದ್ದಾರೆ. 100 ಕೆ.ಜಿ. ತೂಕದ ಸೈನಿಕರನ್ನು ಚಾಕೋಲೆಟ್ ನಿರ್ಮಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಮೊಟ್ಟೆಗಳು, 800 ಕೆ.ಜಿ. ಸ್ಪಂಜ್ ಪೂರಕಗಳನ್ನು ಬಳಸಲಾಗಿದೆ ಎಂದು ಕೇಕ್ ಶೋ ಆಯೋಜಕ ನರೇಂದ್ರ ಭಾಟಿಯಾ ಹೇಳಿದ್ದಾರೆ