ಸ್ನಾನಕ್ಕೆ ಹೋದಾಗ ಬಾಗಿಲು ಮುಚ್ಚಿ ನವವಧುವಿನ ಕೊಲೆ?

ಬುಧವಾರ, 22 ಡಿಸೆಂಬರ್ 2021 (16:47 IST)
ಹಾಸನ : ಮದುವೆಯಾದ ಎರಡೇ ವಾರಕ್ಕೆ ನವವಧು ಸಾವನ್ನಪ್ಪಿರುವ ಘಟನೆ ಹಾಸನದ ಸಲೀಂ ನಗರದಲ್ಲಿ ನಡೆದಿದೆ.

ಫಿಜಾ ಖಾನಂ (22) ಮೃತ ನವವಧು. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಯುವತಿ ಪೋಷಕರು ಆರೋಪ ಮಾಡಿದ್ದಾರೆ.

ಡಿಸೆಂಬರ್ 2 ರಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ನಡುವೆ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ನಮ್ಮ ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಅಳಿಯ ಹಾಗೂ ಅವರ ಮನೆಯವರ ವಿರುದ್ಧ ಆರೋಪ ಕೇಳಿಬಂದಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ