ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ದುಮುಕಿದ ಚುಕ್ಕಿ-ನಂಜುಂಡಸ್ವಾಮಿ

ಭಾನುವಾರ, 17 ಸೆಪ್ಟಂಬರ್ 2023 (20:00 IST)
ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ಚುಕ್ಕಿ-ನಂಜುಂಡಸ್ವಾಮಿ ದುಮುಕ್ಕಿದ್ದಾರೆ.ಚುಕ್ಕಿ-ನಂಜುಂಡಸ್ವಾಮಿ  ದಿ.ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ರವರ ಮಗಳು.ನಗರದ ಯಲಹಂಕದ ಶಿವರಾಮಕಾರಂತ ರೈತ ಹೋರಾಟಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.ಯಲಹಂಕ ತಾಲೂಕಿನ 17ಹಳ್ಳಿಗಳ 3546ಎಕರೆ ಜಮೀನಿಗೆ ಸರ್ಕಾರ ಒಂದು ರೂಪಾಯಿ ಸಹ‌ ನೀಡಿಲ್ಲ.ರೈತರ ಕಣ್ಣೀರ ಕೋಡಿ ಮೇಲೆ ನಿವೇಶನಗಳ ಮಾರಾಟಕ್ಕೆ ಬಿಡಿಎ ಮುಂದಾಗಿದೆ.

ನಮಗೆ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಹಾರ ನೀಡಿ.ಇಲ್ಲವಾದರೆ ನಿವೇಶನಗಳ ಮಾರಾಟ- ಹಂಚಿಕೆ ಮಾಡಬೇಡಿ ಎಂದು ರೈತ ಹೋರಾಟಗಾರರು ಹೇಳ್ತಿದ್ದು,ಗಣೇಶ ಹಬ್ಬದ ನಂತರ 15ಸಾವಿರ ನಿವೇಶನಗಳ ಹಂಚಿಕೆ ಮಾಡುತ್ತೇವೆ ಎಂದು ಬಿಡಿಎ ಹೇಳಿದೆ.ಇದರಿಂದ ಶಿವರಾಮಕಾರಂತ ಬಡಾವಣೆಗೆ ಜಮೀನು‌ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.ನಮಗೆ ಸೂಕ್ತ ಪರಿಹಾರ ಕೊಟ್ಟು ‌ನೀವೇನಾದ್ರು ಮಾಡಿಕೊಳ್ಳಿ‌ಸೂಕ್ತ ಪರಿಹಾರ ಕೊಡದಿದ್ದರೆ ಹೋರಾಟವನ್ನು ರಾಜ್ಯವ್ಯಾಪಿ ಮಾಡ್ತೇವೆ ಎಂದು ರೈತ ಹೋರಾಟಗಾರ್ತಿ ಚುಕ್ಕಿ-ನಂಜುಂಡಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ