ಪಿ ಎಸ್ ಐ ಹಗರದಗ ಕಿಂಗ್ ಪಿನ್ ಮಾಹಿತಿ ಕಲೆಹಾಕಿದ ಸಿಐಡಿ

ಶುಕ್ರವಾರ, 27 ಜನವರಿ 2023 (18:54 IST)
ಎಸ್ ಐ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸಿಐಡಿ ಡಿವೈ ಎಸ್ಪಿ ತನ್ನ ಬಳಿ ಮೂರು ಕೋಟಿ ಲಂಚ ಕೇಳಿದ್ರು. ಅದರಲ್ಲಿ 76 ಲಕ್ಷ ಹಣವನ್ನು ಮುಂಗಡವಾಗಿ  ತನ್ನ ಹಾಗು ಅಳಿಯನ ಅಕೌಂಟ್ ನಿಂದ 76 ಲಕ್ಷ ಡ್ರಾ ಮಾಡಿ ಕೊಟ್ಟಿರೋದಾಗಿ ವಿಡಿಯೋ ಬಿಟ್ಟಿದ್ರು. ಈ ಆರೋಪಿವನ್ನ ಗಂಬೀರವಾಗಿ ತೆಗೆದುಕೊಂಡಿದ್ದ ಸಿಐಡಿ ತನಿಖೆಗೆ ಮುಂದಾಗಿ ಆರ್ ಡಿ ಪಾಟೀಲ್ ಮತ್ತು ಅಳಿಯ ಶ್ರೀಕಾಂತ್ ಖಾತೆಯಲ್ಲಿ ಹಣ ಡ್ರಾ ಆಗಿರೋ‌ ಬಗ್ಗೆ ಬ್ಯಾಂಕ್‌ಗಳಲ್ಲಿ ಮಾಹಿತಿ ಕೇಳಿದ್ರು. ಸದ್ಯ ಬ್ಯಾಂಕ್‌ ಮಾಹಿತಿ ಸಿಐಡಿ ಅಧಿಕಾರಿಗಳ‌ ಕೈ ಸೇರಿದ್ದು,
ಅಸಲಿಗೆ ಆರ್ ಡಿ ಪಾಟೀಲ್ ಹಾಗೂ ಅಳಿಯ ಶ್ರೀಕಾಂತ್ ಅಕೌಂಟ್ ನಿಂದ ಹಣವೇ ಡ್ರಾ ಆಗಿಲ್ಲ ಅನ್ನೋದು ಗೊತ್ತಾಗಿದೆ.
ಜುಲೈ 1,2022 ರಿಂದ ಡಿಸೆಂಬರ್ 31, 2022 ರ ವರೆಗೆ ಅಕೌಂಟ್ ನಿಂದ ಯಾವುದೇ ಹಣ ಡ್ರಾ ಆಗಿಲ್ಲ ಎಂದು ಸಿಐಡಿ ಬ್ಯಾಂಕ್ ಸ್ಪಷ್ಟಪಡಿಸಿದೆ.ಇಬ್ಬರಿಗೂ ಸೇರಿದ 4 ಅಕೌಂಟ್ ಗಳಲ್ಲಿನ ಟ್ರ್ಯಾನ್ಸಾಕ್ಷನ್ ಮಾಹಿತಿಯನ್ನ ಸಿಐಡಿ ಕೇಳಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ