150ನೇ ಗಾಂಧಿ ಜಯಂತಿ: ಸ್ವಚ್ಛತಾ ಆಂದೋಲನಕ್ಕೆ ಬೆಳಕು ತುಂಬಿದ ಮಕ್ಕಳು
ಮಹಾತ್ಮ ಗಾಂಧಿಜೀಯವರ 150 ನೇ ಜಯಂತಿ ಆಚರಣೆ ಅಂಗವಾಗಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತ ಯೋಜನೆಗೆ ಶಾಲಾ ಮಕ್ಕಳು ಬೆಳಕು ತುಂಬಿದರು.
ಯಾದಗಿರಿ ಜಿಲ್ಲೆಯ ನಗನೂರಿನ ಶಾಲಾ ಮಕ್ಕಳು ಗಾಂಧಿ ಆಶಯಕ್ಕೆ ಬೆಳಕು ತುಂಬಿದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಶ್ರೀ ಶರಣಬಸವೇಶ್ವರ ಶಾಲಾ ಮಕ್ಕಳಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಗ್ರಾಮಸ್ಥರು ಸೇರಿ ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.