ಧರ್ಮಸ್ಥಳದಲ್ಲಿ ಶೋಧ ಕಾರ್ಯಾಚರಣೆ ಬಗ್ಗೆ ಸರ್ಕಾರದಿಂದ ಮಹತ್ವದ ತೀರ್ಮಾನ
ಧರ್ಮಸ್ಥಳ ಕೇಸ್ ಬಗ್ಗೆ ಸದನದಲ್ಲೂ ಭಾರೀ ಚರ್ಚೆಯಾಗಿದೆ. ಈಗ ನಡೆಯುತ್ತಿರುವ ಎಸ್ಐಟಿ ತನಿಖೆ ಬಗ್ಗೆ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಿಖೆ ಹೆಸರಿನಲ್ಲಿ ಧರ್ಮಸ್ಥಳಕ್ಕೆ ಅಪಚಾರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಇದರ ಬಗ್ಗೆ ಈಗ ಸರ್ಕಾರದಿಂದಲೇ ಸ್ಪಷ್ಟನೆ ಬಂದಿದೆ. 13 ಪಾಯಿಂಟ್ ಗಳನ್ನು ಮಾಸ್ಕ್ ಮ್ಯಾನ್ ಗುರುತಿಸಿದ್ದ. ಮಾಸ್ಕ್ ಮ್ಯಾನ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಬಳಿಕವೂ ಯಾವುದೇ ಪ್ರಗತಿ ಕಂಡುಬರದೇ ಇದ್ದರೆ ಅಗೆಯುವ ಕಾರ್ಯ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ. ಆರನೇ ಪಾಯಿಂಟ್ ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿತ್ತು. ಇದರ ಬಗ್ಗೆ ಈಗ ಕೂಲಂಕುಷವಾಗಿ ತನಿಖೆ ನಡೆಯುತ್ತಿದೆ. ಬೇರೆ ಯಾವುದೇ ಸ್ಥಳಗಳಲ್ಲಿ ಮಾಸ್ಕ್ ಮ್ಯಾನ್ ಹೇಳಿದಂತೆ ಏನೂ ಪತ್ತೆಯಾಗಿರಲಿಲ್ಲ.