ಬೃಹತ್ ನಕಲಿ ನೋಟು ಜಾಲ ಪತ್ತೆ !
ಸಿಸಿಬಿ ಆರ್ಥಿಕ ಅಪರಾಧ ಪೊಲೀಸ್ ವಿಂಗ್ ಕಾರ್ಯಾಚರಣೆ ನಡೆಸಿ, ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಆರೋಪಿಗಳು ಬೆಂಗಳೂರಿಗೆ ಬಂದಿದ್ದರು. ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಪಿಚ್ಚು ಮುತ್ತು ಮತ್ತು ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.