ಸಿಎಂ ಬಿಎಸ್ ವೈ ಆಡಿಯೋ ವಿಚಾರ; ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ಕೇಸ್ ವಿಳಂಬ ಮಾಡುವ ತಂತ್ರ ಎಂದ ಸಚಿವ
ಮಂಗಳವಾರ, 5 ನವೆಂಬರ್ 2019 (11:22 IST)
ಬೆಂಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ಕೇಸ್ ವಿಳಂಬ ಮಾಡಲು ಸಿದ್ದರಾಮಯ್ಯನವರ ತಂತ್ರ ಇದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಮೈತ್ರಿ ಸರ್ಕಾರ ಉರುಳಿಸದ ಬಗ್ಗೆ ಬಿಜೆಪಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ ಆಡಿಯೋವನ್ನು ಹಿಡಿದುಕೊಂಡು ಅನರ್ಹರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಮನವಿ ಮಾಡಿರುವುದಕ್ಕೆ ಕಿಡಿಕಾರಿದ ಸಚಿವ ಜಗದೀಶ್ ಶೆಟ್ಟರ್, ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ಕೇಸ್ ವಿಳಂಬ ಮಾಡುವ ತಂತ್ರ. ಬಿಜೆಪಿ ಸಭೆಯಲ್ಲಿ ಆಗಿದ್ದು ಸಿದ್ದರಾಮಯ್ಯಗೆ ಹೇಗೆ ಗೊತ್ತು?ಇದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುತಂತ್ರವಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದಕ್ಕೆ ಅಸ್ತ್ರ ಇಲ್ಲ. ಅದಕ್ಕಾಗಿ ಆಡಿಯೋ ಹಿಡಿದು ಟೀಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.