ಖರ್ಜೂರವನ್ನು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಿನ್ನಬಹುದೇ?

ಮಂಗಳವಾರ, 5 ನವೆಂಬರ್ 2019 (07:16 IST)
ಬೆಂಗಳೂರು : ಖರ್ಜೂರ ತುಂಬಾ ಸಿಹಿಯಾದ, ಆರೋಗ್ಯಕ್ಕೆ ಉತ್ತಮವಾದದ್ದು. ಆದರೆ ಇದನ್ನು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಿನ್ನಬಹುದೇ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.




ಅಧ್ಯಯನವೊಂದರ ಪ್ರಕಾರ ಸಕ್ಕರೆ ಕಾಯಿಲೆ ಹೊಂದಿರುವವರು ಖರ್ಜೂರ ತಿಂದರೆ ದೇಹದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.  ಖರ್ಜೂರ ತಿನ್ನುವುದರಿಂದ ಮಧುಮೇಹ ಹೊಂದಿರುವವರ ದೇಹಕ್ಕೆ ಗ್ಲೈಸೆಮಿಕ್ ಮತ್ತು ಲಿಪಿಡ್ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆಯಂತೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ಸಿಹಿಯಾದ ಖರ್ಜೂರವನ್ನು ಸೇವಿಸಬಹುದೆಂದು ಸಂಶೋಧಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ