ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಬುದ್ಧಿ ಹೇಳಿ ಪ್ರಾಣ ಕಳೆದುಕೊಂಡ ಪತಿ

ಗುರುವಾರ, 27 ಫೆಬ್ರವರಿ 2020 (08:59 IST)
ಬೆಂಗಳೂರು : ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯ ಕತ್ತನ್ನು ಸೀಳಿ ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿ ಶಾಂಪುರದ ರೈಲ್ವೆ ಗೇಟ್ ಬಳಿ ನಡೆದಿದೆ.


ವಿನೋದ್ (32) ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿಆಟೋ ಚಾಲಕನಾಗಿದ್ದು, ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದು ಆಕೆಗೆ ಬುದ್ದಿ ಹೇಳಿ ಊರಿಗೆ ಕಳುಹಿಸಿದ್ದಾನೆ. ಆದರೆ ಪತ್ನಿ ಮಾತ್ರ ಆತನ ಜೊತೆ ಸಂಬಂಧ ಮುಂದುವರಿಸಿದ್ದು, ಇದಕ್ಕೆ ಪತಿ ಅಡ್ಡ ಬರುತ್ತಾನೆ ಎಂಬ ಕಾರಣಕ್ಕೆ ಆತನ ಕೊಲೆ ಮಾಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.


ಈ ಬಗ್ಗೆ ದೇವರ ಜೀವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ