ಸಿಎಂ ಫೇಸ್ ಬುಕ್ ಖಾತೆಯಲ್ಲಿ ಖ್ಯಾತೆ..!!!

ಭಾನುವಾರ, 6 ಫೆಬ್ರವರಿ 2022 (16:23 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕಾಮೆಂಟ್ ಮಾಡುವ ಅನಾಮಧೇಯರ ಹಾವಳಿ ಹೆಚ್ಚಾಗಿದ್ದು, ಮುಜುಗರ ಉಂಟು ಮಾಡುತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೆಸ್‍ಬುಕ್‍ನಲ್ಲಿ ಖಾತೆ ಹೊಂದಿದ್ದಾರೆ.
 
ಅದಕ್ಕೆ ಫೆಸ್‍ಬುಕ್‍ನಿಂದ ನೀಲಿ ಟಿಕ್‍ನ ಅಧಿಕೃತ ಮಾನ್ಯತೆಯೂ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಭಾರತ್ ಕುರಿತು ದೇಶದ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳನ್ನು ಉದ್ದೇಶಿಸಿ ಮೂರು ದಿನಗಳ ಹಿಂದೆ ಭಾಷಣ ಮಾಡಿದರು. ಅದರಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು.
 
ಈ ಕಾರ್ಯಕ್ರಮಗಳ ಪೋಟೊಗಳು ಫೆಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಆಗಿದ್ದವು. ಪೋಟೋ ಕೆಳಗೆ ಕಾಮೆಂಟ್ ಬಾಕ್ಸ್‍ನಲ್ಲಿ ವನಜ ವನಜ ಎಂಬ ಹೆಸರಿನ ಖಾತೆಯಿಂದ ಆಕ್ಷೇಪಾರ್ಹ ವಿಷಯ ಪ್ರಸ್ತಾಪವಾಗಿದೆ. ನಮಸ್ಕಾರ್ ಸಿಎಂ ಸರ್, ನಾನು ನಿಮ್ಮ ಹಿಂದೆ ಕುಳಿತಿರುವ ರಾಜಕುಮಾರ್ ಪಾಟೀಲ್ ತೇಲ್ಕರ್ ಸೆಡಂ ಎಂಎಲ್‍ಎಯಿಂದ ಮೊಸ ಹೋದ ನೋಂದ ಮಹಿಳೆ. ನನಗೆ ಹಾಗು ರಾಜ್‍ಕುಮಾರ್‍ಗೆ ಹುಟ್ಟಿರೋ ಮಗುಗೆ ನ್ಯಾಯಕ್ಕೊಸ್ಕರ ಹೋರಾಡೋದಕ್ಕೆ ಮುಂದಾಗುತ್ತಿದ್ದಿನಿ. ಸಾಕಷ್ಟು ಬಾರಿ ನಿಮ್ಮನ್ನು ಭೇಟಿ ಮಾಡಲು ಮುಂದಾಗಿದ್ದೆ, ಆದರೆ ಯಾವತ್ತು ಅವಕಾಶ ಸಿಗಲಿಲ್ಲ. ಸರ್. ನಾನು ಈಗ ತೆಗೆದುಕೊಳ್ಳುವ ಪ್ರತಿ ಸ್ಟೆಪ್‍ಗೂ ನಿಮ್ಮ ಸಹಾಯ ಇರುತ್ತೆ ಅಂತಾ ನಂಬಿದ್ದಿನಿ ಸರ್. ಧನ್ಯವಾದಗಳು ಎಂದು ಹೇಳಿದ್ದಾರೆ.
 
ಇದಕ್ಕೆ ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಏನಾಯಿತು ಎಂದು ಪ್ರಶ್ನಿಸಿದ್ದಾರೆ. ನನಗೆ ಶಾಸಕರಿಂದ ಮೊಸ ಆಗಿದೆ. ಒಬ್ಬ ಮಗ ಇದ್ದಾನೆ, ಸಿಎಂ ಅವರಿಂದ ನ್ಯಾಯ ಕೇಳುತ್ತಿದ್ದೇನೆ. ಬಹುಶಃ ನನಗೆ ನ್ಯಾಯ ಸಿಗಬಹುದು ಎಂದು ವನಜ ಎಂಬುವರ ಖಾತೆಯಿಂದ ಉತ್ತರ ಬಂದಿದೆ. ಎಲ್ಲಿದ್ದೀರಾ ಗೌರವಾನ್ವಿತ ಕಾಮನ್ ಮ್ಯಾನ್ ಸಿಎಂ ಸರ್. ಒಂದು ಹೆಣ್ಣು ಮಗಳಿಗೆ ನಿಮ್ಮ ಪಕ್ಷದ ಎಂಎಲ್‍ಎ ಮಾಡಿರೋ ಮೋಸ ಗಮನಿಸಿ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
 
ಇದಕ್ಕೆ ಕೆಲವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಮೋಸ ಆಗುತ್ತಿದೆ ಎಂದು ಈಗ ಹೇಳುತ್ತಿದ್ದೀರಲ್ಲಾ. ಮಗು ಆಗೋ ತನಕ ಯಾಕೆ ಸುಮ್ಮನಿದ್ರಿ. ಪ್ರೆಗ್ನೆಂಟ್ ಆದಾಗ ಎಲ್ಲಿ ಹೋಗಿದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಶಾಸಕರ ಮೇಲೆ ಇಂತಹ ಸುಳ್ಳು ಆರೋಪ ಮಾಡಿದರೆ ಸರಿ ಇರಲ್ಲ ಎಂದು ಸಂತೋಷ್ ಕುಮಾರ್ ರಂಜೋಲ್ ಎಂಬುವರು ವನಜ ಅವರಿಗೆ ಬೆದರಿಕೆ ಹಾಕಿದ್ದು, ಕ್ಷೇತ್ರದ ಜನರಿಗೆ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಏನು ಎಂದು ಗೋತ್ತು. ಅವರ ಏಳಿಗೆ ಸಹಿಸಲಾಗದೆ ಮಾಜಿ ಶಾಸಕರು ಈ ಹುನ್ನಾರದ ಮೂಲಕ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ವನಜ ಎಂಬುವರ ಖಾತೆಯೇ ನಕಲಿ ಎಂದು ಕಿಡಿಕಾರಿದ್ದಾರೆ.
 
ಇಷ್ಟೇಲ್ಲಾ ಚರ್ಚೆಗಳು ನಡೆಯುತ್ತಿದ್ದರೂ ಸಿಎಂ ಖಾತೆಯಿಂದ ಈ ಕಾಮೆಂಟ್‍ಗಳನ್ನು ಅಳಿಸಿ ಹಾಕುವ ಅಥವಾ ಮರೆ ಮಾಚುವ ಕೆಲಸವಾಗಿಲ್ಲ. ವನಜ ವನಜ ಅವರ ಖಾತೆಯ ಪ್ರೋಫೈಲ್ ಲಾಕ್ ಆಗಿದ್ದು, ಬೆಂಗಳೂರು ನಿವಾಸಿ ಎಂಬುದು ಮಾತ್ರ ಗೋಚರಿಸುತ್ತಿದೆ. ಉಳಿದ ಯಾವ ಮಾಹಿತಿಯೂ ಸ್ನೇಹದ ಪಟ್ಟಿಯಲ್ಲಿ ಇಲ್ಲದವರಿಗೆ ಕಾಣಸಿಗುತ್ತಿಲ್ಲ. ಒಟ್ಟಿನಲ್ಲಿ ಮುಖ್ಯಮಂತ್ರಿಯವರ ಅಕೃತ ಖಾತೆಯಲ್ಲಿ ಈ ರೀತಿಯ ಕಾಮೆಂಟ್‍ಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿವೆ. ನಾಗರಿಕರಲ್ಲೂ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ