ಸಿಎಂ ಹೆಚ್.ಡಿ.ಕೆ ನಿವಾಸ ಮಾರಾಟಕ್ಕೆ ಇದೆ!

ಬುಧವಾರ, 1 ಆಗಸ್ಟ್ 2018 (20:38 IST)
ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ ಅಂತ ಹುಬ್ಬಳ್ಳಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆ ಮಾಡಿದ್ದರು. ಉತ್ತರ ಕರ್ನಾಟಕವನ್ನ ಅಭಿವೃದ್ಧಿ ಪಡಿಸ್ತಿನಿ, ಪಕ್ಷ ಸಂಘಟನೆ ಮಾಡ್ತಿನಿ ಅಂತ ಹೇಳಿಕೊಂಡಿದ್ದರು. ಆದ್ರೆ ಮೂರು ನಾಲ್ಕು ದಿನ ಮನೆಯಲ್ಲಿ ಉಳಿದುಕೊಂಡಿದ್ದು‌ ಬಿಟ್ಟರೆ ಇತ್ತ ಮರಳಿ‌ ನೋಡಲಿಲ್ಲ. 

ಈಗ ಮನೆ ಮಾರಾಟದ ಬಗ್ಗೆ ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ವಾಸವಿದ್ದ ಬಾಡಿಗೆ ಮನೆಯನ್ನು  ಮಾಲೀಕ ಸುರೇಶ ರಾಯರಡ್ಡಿ ಮಾರಾಟ ಮಾಡಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. 10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಅವರ ಖಾಸಗಿ ಕಚೇರಿ ಈಗ ಮಾರಾಟಕ್ಕಿದೆ ಅಂತ ಜಾಹೀರಾತು ಪ್ರಕಟವಾಗಿದೆ. 

ಕಳೆದ 2016 ನವೆಂಬರ್ ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯ ಮಾಯಾಕರ್ ಕಾಲೋನಿಯ ನಿವಾಸವನ್ನು ಅದ್ದೂರಿಯಾಗಿ‌ ಗೃಹ ಪ್ರವೇಶ ಮಾಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಮನೆ ಮಾಡಿ, ಆ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಜನರಿಗೆ ಹತ್ತಿರವಾಗುವ ಯೋಜನೆಯಾಗಿತ್ತು, ಆದರೆ, ಇದೀಗ ಮನೆಯ ಮಾಲೀಕ ಮನೆಯನ್ನು ಮಾರಾಟ ಸೆರಿದಂತೆ ಕುಮಾರಸ್ವಾಮಿ ಬಳಕೆ ಮಾಡುತ್ತಿದ್ದ ಕಚೇರಿ ಸಹ ಮಾರಾಟಕ್ಕಿಡಲಾಗಿದೆ. ನನ್ನ ವೈಯಕ್ತಿಕ ಕಾರಣದಿಂದಾಗಿ ಮನೆಯನ್ನು ಮಾರಾಟ ಮಾಡುತ್ತಿದ್ದೇನೆ. ಈ ಬಗ್ಗೆ   ಕುಮಾರಸ್ವಾಮಿಯವರಿಗೆ ಯಾವುದನ್ನು ತಿಳಿಸಿಲ್ಲ ಎಂದು ಹೇಳಿದ್ದಾರೆ. ಆದ್ರೆ ಕುಮಾರಸ್ವಾಮಿ ಸದ್ಯಕ್ಕೆ ಅದೇ ಮನೆಯಲ್ಲಿ ಇದ್ದಾರೆ. ನಾನು ಮಾರಾಟ ಮಾಡಿದ ಬಳಿಕ, ಅದು ಖರೀದಿಸಿದವರಿಗೆ ಸೇರುತ್ತೆ ಅಂತಾ ಮನೆ ಮಾಲೀಕ ಸುರೇಶ ರಾಯರೆಡ್ಡಿ ಹೇಳಿದ್ದಾರೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನೆ ನೀಡಿದ್ದ ಸುರೇಶ ರಾಯರಡ್ಡಿ, ಬಾಡಿಗೆ ಪಡೀತಿರ್ಲಿಲ್ವಂತೆ. ಬಾಡಿಗೆಯ ಬದಲಾಗಿ ಮುಖ್ಯಮಂತ್ರಿ ಆದ್ಮೇಲೆ ರೈತರ ಸಾಲಮನ್ನಾ ಮಾಡ್ಬೇಕು ಅಂತ ಕಂಡೀಷನ್ ಹಾಕಿದ್ರಂತೆ. ಇವ್ರ ಕಂಡೀಶನ್ ಪ್ರಕಾರ ಸಿಎಂ ಅಲ್ಪ ಸ್ವಲ್ಪ ಸಾಲವನ್ನೂ ಮನ್ನಾ ಮಾಡಿದ್ದಾರೆ ಅಂದುಕೊಂಡ್ರೂ, ಇದು ಸುರೇಶ ರಾಯರೆಡ್ಡಿ ಅವರಿಗೆ ತೃಪ್ತಿ ತಂದಿರ್ಲಿಕ್ಕಿಲ್ಲ. ಕುಮಾರಣ್ಣ ಈಗ ರಾಜ್ಯದ ದೊರೆ. ಹೀಗಾಗಿ ಮನೆ ಖಾಲಿ ಮಾಡಿ ಅಂತ ಹೇಗೆ ಕೇಳೋದು ಅಂತ ಯೋಚಿಸಿ ಸುರೇಶ ರಾಯರಡ್ಡಿ ಮನೆ ಮಾರಾಟಕ್ಕಿಟ್ಟಿರ್ಬಹುದು ಅನ್ನೋ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ