ಕ್ಷೇತ್ರದ ಜನರ ಸೇವೆಗೆ ಮುಂದಾದ ಸಚಿವ ಡಿಕೆಶಿ

ಬುಧವಾರ, 1 ಆಗಸ್ಟ್ 2018 (16:49 IST)
ನನ್ನ ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆಯನ್ನಿಟ್ಟು ನನ್ನನ್ನ ಗೆಲ್ಲಿಸಿ ಕಳುಹಿಸಿದ್ದಾರೆ. ಅವರ ಕಷ್ಟಕ್ಕಾಗದಿದ್ದರೂ ಅವರ ನೋವಿಗಾದ್ರು ಸ್ಪಂದಿಸಬೇಕು. ಎಷ್ಟೋ ಜನ ದೂರವಾಣಿ ಕರೆ ಮಾಡಿ ಹೇಳ್ತಿರ್ತಾರೆ. ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗಳಿಗೆ ಹೋದ್ರೆ ಲಕ್ಷಾಂತರ ರೂಪಾಯಿ ಬಿಲ್ ಮಾಡ್ತಾರೆ. ಬಡವರಾದ ನಾವು ಎಲ್ಲಿಂದ ಕಟ್ಟಲು ಸಾಧ್ಯ ಅಂತ, ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಮೆಡಿಕಲ್ ಕಾಲೇಜನ್ನ ಈ ಬಜೆಟ್ ನಲ್ಲಿ ಮಂಡಿಸಿದ್ದೇವೆ ಹೀಗಂತ ಪ್ರಭಾವಿ ಸಚಿವರು ತಿಳಿಸಿದ್ದು, ಅವರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದರು.  

ಸಚಿವ ಡಿ.ಕೆ. ಶಿವಕುಮಾರ್ ರಾಮನಗರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು.
ರಾಮನಗರ ಜಿಲ್ಲೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಜೆಟ್ ನಲ್ಲಿ ಮಂಡನೆಯಾದಂತೆ, ಅಧಿಕಾರಿಗಳು ಪರಿಶೀಲನೆ ಮಾಡಿದ ಸ್ಥಳಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಕನಕಪುರದ ಸರ್ಕಾರಿ ಆಸ್ಪತ್ರೆಯನ್ನು ಮುನ್ನೂರು ಬೆಡ್ಡ್ ಗಳಿಂದ ನಾಲ್ಕನೂರು ಬೆಡ್ ಗಳಿಗೆ ಏರಿಸಿ ತಾಲೂಕಿನ ಸುತ್ತಮುತ್ತಲ ಹಳ್ಳಿಯ ಜನತೆಗೆ ಅನುಕೂಲಕರವಾಗುವಂತೆ ಮಾಡಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳಿಸಲಾಗುವುದು. ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ