ಸಿಎಂ ಕೋವಿಡ್-19 ರಿಲೀಫ್ ಫಂಡ್ : 50 ಲಕ್ಷ ನೀಡಿದ ಶಾಸಕಿ

ಭಾನುವಾರ, 5 ಏಪ್ರಿಲ್ 2020 (14:44 IST)
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಗಳ ಅನುದಾನವನ್ನು ಶಾಸಕಿಯೊಬ್ಬರು ನೀಡಿದ್ದಾರೆ.

ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ `ಸಿಎಂ ಕೊವಿಡ್-19 ರಿಲೀಫ್ ಫಂಡ್'ಗೆ ಅನುದಾನ ನೀಡಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಈಗಾಗಲೇ ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ರಾಜ್ಯದಲ್ಲೂ ಈ ವೈರಸ್ ಹರಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಅವಿರತ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 20-21 ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನ್ನು ರಾಜ್ಯದಲ್ಲಿ ಕೊವಿಡ್-19 ವೈರಸ್ ನಿಯಂತ್ರಣಕ್ಕಾಗಿ `ಸಿಎಂ ಕೊವಿಡ್ -19 ರಿಲೀಫ್ ಫಂಡ್'ಗೆ ಬಿಡುಗಡೆ ಮಾಡುವಂತೆ ಡಿಸಿಗೆ ತಿಳಿಸಲಾಗಿದೆ. ಹೀಗಂತ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ