ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ ಕುಮಾರಸ್ವಾಮಿ

ಬುಧವಾರ, 21 ನವೆಂಬರ್ 2018 (09:01 IST)
ಬೆಂಗಳೂರು: ಕಬ್ಬು ಬೆಳೆಗಾರರ ಅಸಮಾಧಾನ ತಮಗೆ ಕುತ್ತು ತರುವ ಲಕ್ಷಣಗಳಿದ್ದಾಗಲೇ ಸಿಎಂ ಕುಮಾರಸ್ವಾಮಿ ನಿನ್ನೆ ನಡೆದ ರೈತರ ಜತೆಗಿನ ಸಭೆಯಲ್ಲಿ ತಾತ್ಕಾಲಿಕ ಪರಿಹಾರ ನೀಡಿ ವಿವಾದ ಸದ್ಯದ ಮಟ್ಟಿಗೆ ತಣ್ಣಗಾಗಿಸಿದ್ದಾರೆ.

ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲಿಕರ ಪ್ರತಿನಿಧಿಗಳ ಜತೆ ನಿನ್ನೆ ವಿಧಾನಸೌಧದಲ್ಲಿ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ ಪ್ರತಿಭಟನೆಯ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಶಮನ ಮಾಡಿದ್ದಾರೆ. ಕಬ್ಬು ಬೆಳೆಗಾರರಿಗೆ ಬಾಕಿ ನೀಡುವ ಕುರಿತಂತೆ ಸಿಎಂ ಭರವಸೆ ನೀಡಿದ್ದಾರೆ.

ಆದರೆ ಸಿಎಂ ಭರವಸೆ ನೀಡಿದಷ್ಟು ಇದು ಸುಲಭವಲ್ಲ. ಯಾಕೆಂದರೆ ಕಾರ್ಖಾನೆ ಮಾಲಿಕರು ಬಾಕಿ ಹಣ ಪಾವತಿ ವಿಚಾರದಲ್ಲಿ ಸರ್ಕಾರದ ಸಂಧಾನಕ್ಕೆ ಒಪ್ಪಿಕೊಂಡಿಲ್ಲ. ಹೀಗಾಗಿ ಇಂದು ಮತ್ತೆ ಕಾರ್ಖಾನೆ ಮಾಲಿಕರರ ಮನ ಒಲಿಸಲು ಸಿಎಂ ಸಭೆ ಕರೆದಿದ್ದಾರೆ. ಕಾರ್ಖಾನೆಗಳು ನಷ್ಟದಲ್ಲಿರುವುದರಿಂದ ರೈತರ ಬೇಡಿಕೆಯಂತೆ ಟನ್ ಗೆ 2900 ರೂ. ಗಳಂತೆ ದರ ನೀಡಲು ಮಾಲಿಕರ ಪ್ರತಿನಿಧಿಗಳು ಒಪ್ಪಿಕೊಂಡಿಲ್ಲ. ಹೀಗಾಗಿ ಸಿಎಂಗೆ ಹೊಸ ತಲೆನೋವು ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ