ತಮ್ಮ ಕಣ್ಣೀರಿಗೆ ಮೂಲಕಾರಣರಾರು ಎಂದು ಬಹಿರಂಗಪಡಿಸಿದ ಸಿಎಂ ಕುಮಾರಸ್ವಾಮಿ
ಅಷ್ಟಕ್ಕೂ ತಾನು ಸಾರ್ವಜನಿಕವಾಗಿ ಗದ್ಗತಿರಾಗಲು ನಿಜವಾದ ಕಾರಣ ಕಾಂಗ್ರೆಸ್ ನಾಯಕರು ಎಂದು ಬಿಜೆಪಿ ಟೀಕೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿಎಂ ರಾಜ್ಯ ನಾಯಕರಿಂದ ತಮಗೆ ತೊಂದರೆಯಾಗಿಲ್ಲ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರ ನಡೆಸಲು ಕಾಂಗ್ರೆಸ್ ನಿಂದ ನನಗೆ ತೊಂದರೆಯಾಗಿಲ್ಲ. ನನ್ನ ಕಣ್ಣೀರಿಗೆ ಅವರು ಕಾರಣರಲ್ಲ. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ವಿಚಾರದಲ್ಲಿ ಸಾರ್ವಜನಿಕರಿಂದ ಸೂಕ್ತ ಪ್ರೋತ್ಸಾಹ ದೊರೆಯದ ಕಾರಣ ಮನಸ್ಸಿಗೆ ಬೇಸರವಾಗಿದೆ. ಹೀಗಾಗಿಯೇ ಕಣ್ಣೀರು ಹಾಕಿದೆ. ಆದರೆ ಕಾಂಗ್ರೆಸ್ ನಾಯಕರಿಂದ ಕಣ್ಣೀರು ಹಾಕಿದೆ ಎಂದು ತಿರುಚಬೇಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.