ಕಣ್ಣೀರು ಹಾಕಿದ ಬೆನ್ನಲ್ಲೇ ದೆಹಲಿಗೆ ದೌಡಾಯಿಸಿದ ಕುಮಾರಸ್ವಾಮಿ, ದೇವೇಗೌಡ
ಸಿಎಂ ಕುಮಾರಸ್ವಾಮಿ ದೆಹಲಿಯಲ್ಲಿ ಕಾವೇರಿ ಪ್ರಾಧಿಕಾರ ರಚನೆ ವಿಚಾರವಾಗಿ ನಾಳೆ ಸಂಸದರ ಜತೆ ಸಭೆ ನಡೆಸಲಿದ್ದಾರೆ. ಇದೇ ಕಾರಣಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲಾ ಸಂಸದರು ಮತ್ತು ಕೇಂದ್ರ ಪ್ರತಿನಿಧಿಸುವ ಎಲ್ಲಾ ರಾಜ್ಯದ ಸಚಿವರೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಕರ್ನಾಟಕ ಭವನದಲ್ಲಿ ನಡೆಯಲಿದೆ.
ಇನ್ನು, ದೇವೇಗೌಡರು ದೆಹಲಿಗೆ ಭೇಟಿ ನೀಡುತ್ತಿರುವ ಉದ್ದೇಶವೇ ಬೇರೆ. ಮುಂಬರುವ ಸಂಸತ್ತು ಅಧಿವೇಶನಕ್ಕೆ ಈಗಿನಿಂದಲೇ ತಯಾರಾಗಲು ದೇವೇಗೌಡರು ಪುತ್ರನ ಜತೆಗೆ ದೆಹಲಿಗೆ ತೆರಳುತ್ತಿದ್ದಾರೆ.