ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಇಂದು ಕಾರ್ಖಾನೆ ಮಾಲಿಕರ ಜತೆ ಸಿಎಂ ಸಭೆ

ಗುರುವಾರ, 22 ನವೆಂಬರ್ 2018 (09:29 IST)
ಬೆಂಗಳೂರು: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಇಂದು ಕಾರ್ಖಾನೆ ಮಾಲಿಕರ ಜತೆ ಸಿಎಂ ಕುಮಾರಸ್ವಾಮಿ ಸಭೆ ನಡೆಸುತ್ತಿದ್ದಾರೆ.

ಮೊನ್ನೆ ರೈತರು ಮತ್ತು ಕಾರ್ಖಾನೆ ಮಾಲಿಕರ ಪ್ರತಿನಿಧಿಗಳ ಜತೆ ಸಿಎಂ ಸಭೆ ನಡೆಸಿದ್ದರು. ಈ ವೇಳೆ ರೈತರು ಪ್ರತಿ ಟನ್ ಕಬ್ಬಿಗೆ 2930 ರೂ. ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಅಲ್ಲದೆ, ಕಟಾವಿಗೆ ಮೊದಲೇ ಕಬ್ಬಿಗೆ ದರ ನಿಗದಿ ಮಾಡಬೇಕು ಹಾಗೂ ಬಾಕಿ ಹಣ ಪಾವತಿಸಬೇಕೆಂದು ಆಗ್ರಹಿಸಿದ್ದರು.

ಈ ಬಗ್ಗೆ ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ಇಂದು ಕಾರ್ಖಾನೆ ಮಾಲಿಕರ ಜತೆ ಸಭೆ ನಡೆಸಿ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಹೀಗಾಗಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ. ಇನ್ನೊಂದೆಡೆ ಸಿಎಂ ಭರವಸೆ ಹಾಗೂ ಇಂದಿನ ಸಭೆಯ ಹೊರತಾಗಿಯೂ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ